2 ಮಲಯಾಳಂ ನ್ಯೂಸ್ ಚಾನಲ್ ಗಳ ಮೇಲಿದ್ದ ನಿಷೇಧ ತೆರವು…!

ನವದೆಹಲಿ:

   ಕೆಲ ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತಂತೆ ಪ್ರಸಾರ ಮಾಡಿದ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಎರಡು ಮಲಯಾಳಂ ಸುದ್ದಿವಾಹಿನಿಗಳ ಮೇಲೆ 48 ಗಂಟೆಗಳ ಕಾಲ ನಿಷೇಧ ಹೇರಿತ್ತು ಅದನ್ನು ಈಗ ತೆರವುಗೊಳಿ ಸಲಾಗಿದೆ.

   ಮೀಡಿಯಾ ಒನ್ ಮತ್ತು ಏಷ್ಯಾನೆಟ್‌ ಮೇಲೆ ಹೇರಲಾಗಿದ್ದ 48 ಗಂಟೆಗಳ ಕಾಲ ನಿಷೇಧವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದೀಗ ತೆರವುಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮೂಲಗಳ ಪ್ರಕಾರ ಸುದ್ದಿವಾಹಿನಿಗಳ ಮೇಲೆ ನಿಷೇಧ ಹೇರುತ್ತಿದ್ದಂತೆಯೇ ಈ ಬಗ್ಗೆ ಎರಡೂ ವಾಹಿನಿಗಳ ಆಡಳಿತ ಮಂಡಳಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ವಾಹಿನಿಗಳ ಮೇಲೆ ಹೇರಲಾಗಿರುವ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸುದ್ದಿವಾಹಿನಿಗಳ ಮೇಲಿನ ನಿಷೇಧ ತೆರವುಗೊಳಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

   ದಾಳಿಕೋರರು ಚಾಂದ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಳೆ ದಾಳಿ ನಡೆಸಿದ್ದಾಗಿ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಹೇಳಿದ್ದು ಗಲಭೆಕೋರರು ಅಂಗಡಿಗಳಿಗೆ ಬೆಂಕಿ ಹಚ್ಚಿದಾಗ ಪೊಲೀಸರು ಕಾರ್ಯನಿರ್ವಹಿಸಿಲ್ಲ ಎಂದು ಸುದ್ದಿಮಾದ್ಯಮ ಆರೋಪಿಸಿದ್ದಾಗಿ ಎಂದು ಸಚಿವಾಲಯ ಆರೋಪಿಸಿತ್ತು. 

   ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ವರದಿಯಲ್ಲಿ  ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಬಿತ್ತರ ಪಡಿಸಿದ್ದು, ನಿರ್ದಿಷ್ಟ ಸಮುದಾಯದ ಪರವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಿವೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕಾಗಿ 1994ರ ಕೇಬಲ್ ನೆಟ್‌ವರ್ಕ್‌ ಆಕ್ಟ್‌ನ ಅಡಿಯಲ್ಲಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸಚಿವಾಲಯ ತಿಳಿಸಿತ್ತು.ಧಾರ್ಮಿಕ ಸ್ಥಳ ಅಥವಾ ನಿರ್ದಿಷ್ಟ ಸಮುದಾಯದ ಮೇಲಿನ ದಾಳಿ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಯಾವುದೇ ವರದಿಯನ್ನು ಪ್ರಸಾರ ಪಡಿಸುವಂತಿಲ್ಲ ಎಂದು 1994ರ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link