ತಿಪಟೂರು
ತಾಲ್ಲೂಕಿನ ನೊಣವಿನಕೆರೆಯ ಬಸ್‍ನಿಲ್ದಾಣದ ಹಿಂಭಾಗದಲ್ಲಿನ ಕಾಲುವೆಯಲ್ಲಿ ಸುಮಾರು 7-8 ವರ್ಷ ವಯಸ್ಸಿನ ಬಾಲಕಿಯ ಶವ ದೊರೆತಿದ್ದು ಪ್ರಕರಣ ನೊಣವಿನಕೆರೆ ಠಾಣೆಯಲ್ಲಿ ದಾಖಲಾಗಿದೆ.ಬಾಲಕಿಯ ಎತ್ತರ ಸುಮಾರು 3.5 ರಿಂದ 4 ಅಡಿಯಿದ್ದು, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಮೈಮೇಲೆ ಹಸಿರು ಬಣ್ಣದ ಟೀಷರ್ಟ್, ಕೆಂಪು ಮತ್ತು ಹಸಿರುವ ಬಣ್ಣದ ಚಡ್ಡಿ ಧರಿಸಿದ್ದಾಳೆ. ಹೆಚ್ಚಿನ ಮಾಹಿತಿಗಾಗಿ ನೊಣವಿನಕೆರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








