ಮನೆ ನಿರ್ಮಿಸಿ ಕೊಡುವ ತನಕ ಹೋರಾಟ

ಚಿತ್ರದುರ್ಗ:

     ಸ್ವಂತ ನಿವೇಶನಗಳಿಲ್ಲದೆ ಮನೆ ಕಟ್ಟಿಕೊಳ್ಳಲು ಆಗದೆ ಜೋಪಡಿ, ಕೊಳಗೇರಿ, ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಪೈಪ್‍ಗಳಲ್ಲಿ ವಾಸ ಮಾಡುತ್ತಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ನಿವೇಶನರಹಿತರ ಮತ್ತು ವಸತಿರಹಿತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಡೋಂಗ್ರೆ ಆಳುವ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

     ಫೆ.2 ರಂದು ಬಳ್ಳಾರಿಯಿಂದ ಆರಂಭಿಸಿರುವ ಸೂರಿಗಾಗಿ ಸಮರ ಜಾಥ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದ ಮುಂಭಾಗ ನಿವೇಶನರಹಿತರು ಮತ್ತು ವಸತಿರಹಿತರನ್ನುದ್ದೇಶಿಸಿ ಮಾತನಾಡಿದರು.

      62 ದಿನಗಳ ಜಾಥ ಈಗಾಗಲೇ 927 ಕಿ.ಮೀ. ಪೂರೈಸಿದ್ದು, ಮಾ.31 ರಂದು ಬೆಂಗಳೂರು ತಲುಪಿ ದೊಡ್ಡ ಸಮಾವೇಶ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ಕಣ್ಣುತೆರೆಸಲಾಗುವುದು. ಇದಕ್ಕೆ ನಿಮ್ಮಗಳ ಬೆಂಬಲ ಬೇಕು. ಅದಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯದಲ್ಲಿ ಹೊಸ ಹೋರಾಟವನ್ನು ಕೈಗೆತ್ತಿಕೊಂಡಿದೆ.

    ರಾಜಕೀಯ ಪಕ್ಷಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಅವರದೇನಿದ್ದರೂ ಮತದಾರರಿಂದ ಓಟು ಹೇಗೆ ಪಡೆಯಬೇಕೆಂಬುದರ ಆಲೋಚನೆಯಷ್ಟೆ. ಚುನಾವಣೆಯಲ್ಲಿ ಹಣ, ಹೆಂಡ, ಸೀರೆಯ ಆಸೆಗೆ ಮತಗಳನ್ನು ಮಾರಿಕೊಳ್ಳಬೇಡಿ. ಯೋಗ್ಯರಿಗೆ ಮತ ನೀಡಿ ಎಂದು ವಸತಿರಹಿತರು, ನಿವೇಶನರಹಿತರು ಹಾಗೂ ಕೊಳಗೇರಿಗಳನ್ನು ಜಾಗೃತಿಗೊಳಿಸಿದರು.

     ದೇಶಕ್ಕೆ ಸ್ವಾತಂತ್ರ ಬಂದು 73 ವರ್ಷಗಳಾಗಿದೆ. ಇಷ್ಟೊತ್ತಿಗಾಗಲೆ ಎಲ್ಲರಿಗೂ ಮನೆಗಳು ಸಿಗಬೇಕಿತ್ತು. ರಾಜ್ಯದಲ್ಲಿ 37 ಲಕ್ಷ ಕುಟುಂಬಗಳಿಗೆ ನೆಲೆಯಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಯೇ ಹೇಳಿದ್ದಾರೆ. ನಮ್ಮ ಜಾಥ ಈಗಾಗಲೆ ನೂರಾರು ಹಳ್ಳಿಗಳನ್ನು ಸಂಪರ್ಕಿಸಿದೆ ಸಮಸ್ಯೆಗಳು ಅಗಾಧವಾಗಿದೆ. ಕಮ್ಯುನಿಸ್ಟ್ ಪಕ್ಷ ಹೋರಾಟಕ್ಕಾಗಿಯೇ ಹುಟ್ಟಿಕೊಂಡಿರುವುದರಿಂದ ಭೂಮಿ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.

    ಹೋರಾಟ ಮಾಡದಿದ್ದರೆ ಯಾವ ಸರ್ಕಾರಗಳು ನಿಮ್ಮ ಕಷ್ಟವನ್ನು ಕೇಳುವುದಿಲ್ಲ. ಬಡವರು ಬಡವರಾಗಿಯೇ ಉಳಿಯಬೇಕಾಗುತ್ತದೆ. ನಮ್ಮ ಈ ಹೋರಾಟಕ್ಕೆ ಒಂದರೆಡು ವರ್ಷಗಳಲ್ಲಿ ಎಲ್ಲರಿಗೂ ಮನೆ ಸಿಗುವುದಿಲ್ಲ. ಕನಿಷ್ಟ ಐದು ವರ್ಷಗಳಾಗಬೇಕು. ಯುದ್ದ ಮಾಡದೆ ಗೆಲ್ಲಲು ಆಗದು. ಗ್ರಾ.ಪಂ.ಗಳಲ್ಲಿ ಕಂಪ್ಯೂಟರ್ ಲಾಕ್ ಆಗಿದೆ ಎನ್ನುವ ಉತ್ತರಗಳು ಬರುತ್ತಿವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಕಂಪ್ಯೂಟರ್ ಓಪನ್ ಮಾಡಿಸುವುದೇ ನಮ್ಮ ಉದ್ದೇಶ. ನೀವುಗಳೆಲ್ಲರೂ ನಮ್ಮ ಹೋರಾಟದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.

    ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ, ರಾಜ್ಯ ಮಂಡಳಿ ಸದಸ್ಯ ಟಿ.ಆರ್.ಉಮಾಪತಿ, ಜಿಲ್ಲಾ ಸಹ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ಕಿಸಾನ್‍ಸಭಾ ರಾಜ್ಯಾಧ್ಯಕ್ಷ ದೊಡ್ಡುಳ್ಳಾರ್ತಿ ಕರಿಯಣ್ಣ, ಎ.ಐ.ಟಿ.ಯು.ಸಿ.ಜಿಲ್ಲಾಧ್ಯಕ್ಷ ಬಸವರಾಜಪ್ಪ, ಕೆ.ಜ್ಯೋತಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಸತ್ಯಕೀರ್ತಿ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap