ಭೋಪಾಲ್:
ಮಧ್ಯ ಪ್ರದೇಶದ ಕಮಲ್ ನಾಥ್ ಸರ್ಕಾರವನ್ನು ಕೆಡವಲು ನಮ್ಮ ಪಕ್ಷ ಆಸಕ್ತಿ ಹೊಂದಿಲ್ಲ, ಸದ್ಯ ನಡೆಯುತ್ತಿರುವ ಬೆಳವಣಿಗಳಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು ಭವ್ಯವಾಗಿ ಸ್ವಾಗತಿಸಿದರು. ಮಧ್ಯ ಪ್ರದೇಶ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು ಎಂದರು. ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಪ್ರಶ್ನಿಸಿದಾಗ ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಎಂದರು. ಇದೇ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಆದರೆ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ನರೊಟ್ಟಮ್ ಮಿಶ್ರಾ ಅವರು ಕಮಲ್ ನಾಥ್ ಸರ್ಕಾರ ಬೀಳಬಹುದು ಎನ್ನುತ್ತಿದ್ದಾರೆ.