ಕರೋನ ಭೀತಿ : ತಿರುಪತಿಗೆ ಬರದಂತೆ ಟಿಟಿಡಿ ಮನವಿ!!

ತಿರುಪತಿ :

     ಕೊರೊನಾ ವೈರಸ್ ಭೀತಿಯಿಂದ ತಿರುಪತಿಗೆ ಬರುವ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮಹತ್ವದ ಸೂಚನೆ ನೀಡಿದೆ.

      ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವ ಟಿಟಿಡಿ , ವಿದೇಶಿ ಪ್ರವಾಸಿಗರಿಗೆ ತಿರುಪತಿಗೆ ಬರದಂತೆ ಮನವಿ ಮಾಡಿದೆ.

      ತಿರುಪತಿಗೆ ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ. ಹೀಗಾಗಿ ಒಬ್ಬರಿಂದ ಒಬ್ಬರಿಗೆ ವೈರಸ್ ಹರಡಿದರೆ ಕಷ್ಟ ಎಂದು ಈ ನಿಯಮ ಪಾಲಿಸಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮೇಲೆ ನಿಗಾ ವಹಿಸಲಾಗಿದೆ. ಭಕ್ತಾಧಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಭಕ್ತಾಧಿಗಳು ಮಾಸ್ಕ್ ಧರಿಸಿ ಬರುವಂತೆ ಸೂಚನೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link