ಭೋಪಾಲ್:

ಪಿಓಕೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ಎನ್ ಡಿ ಎ ಸರ್ಕಾರ ಏಕೆ ಇನ್ನೂ ಪ್ರಚಾರದ ಸರಕಾಗಿ ಬಳಸುತ್ತಿದೆ ಎಂದು ಪತ್ರಕರ್ತ ಕೇಳಿದ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದು, ‘ನನಗೂ ಹಿಂದಿ ಅರ್ಥವಾಗುತ್ತದೆ’ ಮತ್ತು ಹಿಂದಿ ಚೆನ್ನಾಗಿಯೇ ಬರುತ್ತದೇ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಸ್ಥಳದಲ್ಲಿದ್ದ ಪತ್ರಕರ್ತನೊಬ್ಬ ನಿರ್ಮಲಾ ಸೀತಾರಾಮನ್ ಅವರಿಗೆ ಸರ್ಜಿಕಲ್ ಸ್ಟ್ರೈಕ್ ಮುಗಿದ 2 ವರ್ಷಗಳ ಬಳಿಕವೂ ಎನ್ ಡಿ ಎ ಸರ್ಕಾರ ಆ ವಿಷಯವನ್ನು ಏಕೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದೆ ಎಂದು ಟೀಕಿಸುವ ಧಾಟಿಯಲ್ಲಿ ಕೇಳಿದ ಪ್ರಶ್ನೆಗೆ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ ಸೀತಾರಾಮನ್ ಸ್ವಲ್ಪ ಸಿಟ್ಟಿನ ಧ್ವನಿಯಲ್ಲೇ ನೀವು ಜಕೇಳಿದ ಪ್ರಶ್ನೆಯಲ್ಲಿ ‘ಬಿನ್ ಬಜಾಯೆ’ ಪದ ಬಳಕೆ ಮಾಡಿದ್ದೀರಲ್ಲದೇ ಇದಕ್ಕೆ ಉತ್ತರವನ್ನು ಈಗಾಗಲೇ ನೀಡಿ ಆಗಿದೆ ಮತ್ತೊಂದು ವಿಷಯವೇನೆಂದರೆ ನಿಮ್ಮ ಪ್ರಶ್ನೆಯ ಅರ್ಥ ನನಗೆ ಮನವರಿಕೆಯಾಗಿದ್ದು ನನಗೂ ಹಿಂದಿ ಅರ್ಥವಾಗುತ್ತದೆ ಎಂದು ಸ್ವಲ್ಪ ಏರು ಧ್ವನಿಯಲ್ಲೇ ಉತ್ತರಿಸಿದ ಘಟನೆ ನಡೆದಿದೆ.
