ಗುತ್ತಲ:
ಸಮೀಪದ ತೆರದಹಳ್ಳಿ ಗ್ರಾಮದ ತುಂಗಭದ್ರ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಕಬ್ಬಿಣದ ಕೊಪ್ಪರಿಗಳನ್ನು ಸೋಮವಾರ ವಶಪಡಿಸಿಕೊಂಡು ನಾಶಪಡಿಸಿದ ಘಟನೆ ನಡೆದಿದೆ.ಗುತ್ತಲ ಹೋಬಳಿಯ ಸಮೀಪದ ತೆರದಹಳ್ಳಿ ಗ್ರಾಮದ ತುಂಗಭದ್ರ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ನಡೆಯುತ್ತಿರುವ ಮಾಹಿತಿ ಮೇರೆಗೆ ಹಾವೇರಿ ತಹಶೀಲ್ದಾರ ಶಂಕರ್.ಜಿ.ಎಸ್ ಹಾಗೂ ಪಿಎಸ್ಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ಮಾಡಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಲಾಗುತ್ತಿದ್ದ 6 ಕಬ್ಬಿಣದ ಕೊಪ್ಪರಿಗಳನ್ನು ವಶಪಡಿಸಿಕೊಂಡು ನಾಶ ಪಡಿಸಿ ಗುತ್ತಲ ಪೊಲೀಸ್ ಠಾಣೆಯಗೆ ರವಾನಿಸಲಾಯಿತು. ನಾಶಪಡಿಸಿಲಾದ ಕೊಪ್ಪರಿಗೆಯ ಅಂದಾಜು ಮೊತ್ತ 1.80 ಲಕ್ಷ( ಒಂದು ಲಕ್ಷದ ಎಂಬತ್ತು ಸಾವಿರ) ಎಂದು ತಿಳಿದು ಬಂದಿದೆ.
ದಾಳಿಯಲ್ಲಿ ತಹಶೀಲ್ದಾರ ಶಂಕರ್.ಜಿ.ಎಸ್, ಪಿಎಸ್ಐ ಶಂಕರಗೌಡ ಪಾಟೀಲ, ಕಂದಾಯ ನೀರಿಕ್ಷಕ ಆರ್.ಎನ್ ಮಲ್ಲಾಡದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಸ್.ಬಿ ಮಧುಸುಧನ್, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಉಜನಿ, ಮತ್ತು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ