ಐಟಿ ರಿಟರ್ನ್ಸ್, ಆಧಾರ್-ಪ್ಯಾನ್ ಲಿಂಕ್ ಗೆ ಜೂ.30 ರವರೆಗೆ ಗಡುವು!!

ನವದೆಹಲಿ :

      2018-19 ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ಸಲ್ಲಿಕೆ, ಆಧಾರ್-ಪ್ಯಾನ್ ಲಿಂಕ್ ನ ಕೊನೆಯ ದಿನಾಂಕವನ್ನು ಜೂ.30ಕ್ಕೆ ಮುಂದೂಡಲಾಗಿದೆ.

      ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಅಗತ್ಯ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2018-19ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಜೂನ್ 30ರ ವರೆಗೆ ಅವಕಾಶ ಕಲ್ಪಿಸಲಾಗುವುದು. ತೆರಿಗೆ ಪಾವತಿ ವಿಳಂಬವಾದರೆ ಶೇ 12ರ ಬದಲಿಗೆ ಶೇ 9ರಷ್ಟು ದಂಡ ವಿಧಿಸಲಾಗುವುದು ಪ್ಯಾನ್ ಗೆ ಆಧಾರ್ ಜೋಡಣೆಯ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗುವುದು, ತೆರಿಗೆ ಸಂಬಂಧಿಸಿದ ಎಲ್ಲ ವಿವರಗಳ ಸಲ್ಲಿಕೆಯನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

      ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಸೆಪ್ಟೆಂಬರ್‌ 30ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿಸಲು ಸೂಚಿಸಲಾಗಿತ್ತು. ಈಗ ಈ ಗಡವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಹಣಕಾಸು ಸಚಿವಾವಲಯ ಸೂಚನೆ ಹೊರಡಿಸಿದೆ.

      ವಿವಾದ್ ಸೇ ವಿಶ್ವಾಸ್ ಯೋಜನೆಯನ್ನು ಜೂನ್ 30, 2020ರ ತನಕ ವಿಸ್ತರಣೆ ಮಾಡಲಾಗುವುದು ಟಿಡಿಎಸ್ ಜಮಾ ಅವಧಿ ವಿಸ್ತರಣೆ ಇಲ್ಲ. ಆದರೆ ಬಡ್ಡಿ ದರ ಕಡಿತ ಮಾಡಲಾಗುವುದು ಎಂದರು.

     ನಾವು ಆರ್ಥಿಕ ಪ್ಯಾಕೇಜ್ ನೊಡನೆ ಅತಿ ಶೀಘ್ರದಲ್ಲೇ ಬರಲಿದ್ದೇವೆ.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು,ನಡೆಸುವ ಯಾವುದೇ ಕಂಪನಿಗೆ ದಂಡ ಅಥವಾ ಬಡ್ಡಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ.5 ಕೋಟಿ ರೂ.ಗಳ ವಹಿವಾಟು ಹೊಂದಿರುವ ದೊಡ್ಡ ಕಂಪನಿಗಳಿಗೆ, ಶೇಕಡಾ 9 ರಷ್ಟು ಕಡಿಮೆ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. “ಹೊಸದಾಗಿ ಸಂಯೋಜಿತ ಕಂಪನಿಗಳಿಗೆ, 6 ತಿಂಗಳಲ್ಲಿ ವ್ಯವಹಾರ ಪ್ರಾರಂಭದ ಘೋಷಣೆಯನ್ನು ಸಲ್ಲಿಸುವ ಅವಶ್ಯಕತೆಯಿದೆ, ನಾವು ಈಗ ಹೆಚ್ಚುವರಿ 6 ತಿಂಗಳ ಸಮಯವನ್ನು ನೀಡುತ್ತೇವೆ” ಎಂದು ಸೀತಾರಾಮನ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap