ಅವರ ಗೊಡ್ಡು‌ ಬೆದರಿಕೆಗೆ ಹೆದರೊಲ್ಲ : ಶ್ರೀರಾಮುಲು

ಬಳ್ಳಾರಿ:

   ಒಂದುವರೆ ವರ್ಷಗಳ ಕಾಲ ತುಟಿ‌‌ ಬಿಚ್ಚದ ಸರಕಾರ ಈಗ ಸಿದ್ದರಾಮಯ್ಯ ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪ ನನ್ನ ಮೇಲೆ ಪ್ರಾಸಿಕ್ಯೂಶನ್‌ಗೆ ಶಿಫಾರಸು ‌ಮಾಡಲು ಹೊರಟಿದ್ದಾರೆ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀತಾಮುಲು ಹೇಳಿದರು.

   ಸಂಡೂರು ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತ‌ನಾಡಿದರು. ಕಾಂಗ್ರೆಸ್ ಸರಕಾರದ ‌ಗೊಡ್ಡು‌ ಬೆದರಿಕೆ ನನಗೆ ಏನು ಮಾಡದು. ನಾನು ಸಚಿವನಾಗಿದ್ದ‌ ಅವಧಿಯಲ್ಲಿ ಕಲಬುರಗಿಯಿಂದ ಕರೋನಾ ರಾಜ್ಯದ ತುಂಬೇಲ್ಲಾ ಹರಡಿತ್ತು. ನಾನು ಆರೋಗ್ಯ ಸಚಿವ ಇದ್ದೆ.

   ಟಾಸ್ಕ್ ಪೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರ ಮಾಡ್ತಿರೋ ಭ್ರಷ್ಟಾಚಾರ ಮುಚ್ಚಾಕೋಕೆ, ನನ್ನ ಮೇಲೆ, ಯಡಿಯೂರಪ್ಪ ಮೇಲೆ ಪ್ರಾಶಿಕ್ಯೂಷನ್ ಗೆ ಕೊಡಲು ಹೊರಟಿದ್ದಾರೆ. ಗೊಡ್ಡು ಬೆದರಿಕೆಗೆ ನಾವು ಹೆದರೋಲ್ಲ. ದೇವರ ಜತೆ ಅಂದು ನಾವು ಕೆಲಸ ಮಾಡಿದ್ದೇವೆ. ಅವರು ಏನು, ಮಾಡ್ತಾರೋ, ಮಾಡಲಿ. ನಾವು ಗೊಡ್ಡ ಬೆದರಿಕೆಗೆ ಹೆದರೋಲ್ಲ. ವಾಲ್ಮೀಕಿ ಹಗರಣ ಯಾಕೆ ಆಯ್ತು, ಅಂತ ನಾವು ಜನರ ಬಳಿ ಹೇಳ್ತಿದ್ದೇವೆ.

   ಇದನ್ನೆಲ್ಲ ಮುಚ್ಚಿಹಾಕೋ ಷಡ್ಯಂತ್ರಗಳಿಂದ ಈಗ ಕೋವಿಡ್ ವಿಚಾರ ತೆಗೆದಿದ್ದಾರೆ.ಒಂದೂವರೇ ವರ್ಷಗಳ ಕಾಲ ಏನು ಮಾಡ್ತಿದ್ರಿ ನೀವು-? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ ರಾಮುಲು, ನನ್ನ ವಿರುದ್ದ ಒಂದೇ, ಒಂದು ಆರೋಪ ಸಾಬಿತು ಮಾಡಲಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೆನೆ. ದ್ವೇಷದ ರಾಜಕಾರಣ ಇದು ಒಳ್ಳೆಯದಲ್ಲಾ ರಿಜನಲ್ ಪಾರ್ಟಿ ಗಳು ದ್ವೇಷದ ರಾಜಕಾರಣ ಮಾಡ್ತವೆ, ಆದ್ರೆ ನ್ಯಾಷನಲ್ ಪಾರ್ಟಿ ಇದೇ ಮೊದಲ ಬಾರಿಗೆ ಮಾಡ್ತಿದೆ. ನಾವು ಕಾನೂನು ಹೋರಾಟ ಮಾಡ್ತೆವೆ ಎಂದ ಶ್ರೀರಾಮುಲು ಹೇಳಿದರು.

Recent Articles

spot_img

Related Stories

Share via
Copy link