ದೇಶಾದ್ಯಂತ ಮಾನ್ಸೂನ್ ಮಾರುತಗಳು ಚುರುಕು….!

ನವದೆಹಲಿ: 

   ದೇಶಾದ್ಯಂತ ಮಾನ್ಸೂನ್ ಮಾರುತಗಳು ಚುರುಕುಗೊಂಡಿದ್ದು, ನೈಋತ್ಯ ಮಾನ್ಸೂನ್ ಮಾರುತಗಳು ನಿಗದಿತ ಸಮಯಕ್ಕಿಂತ ಆರು ದಿನ ಮುಂಚಿತವಾಗಿ ಇಡೀ ದೇಶವನ್ನು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

   ವಾರದ ಹಿಂದಷ್ಟೇ ಉಷ್ಣ ಅಲೆಯಿಂದ ತತ್ತರಿಸಿ ಹೋಗಿದ್ದ ಉತ್ತರ ಭಾರತದ ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮಾನ್ಸೂನ್ ಮಾರುತಗಳು ಆವರಿಸಿದ್ದು, ಅಲ್ಲಿ ಧಾರಾಕಾರ ಮಳೆಯಾಗುತ್ತಿವೆ.

   ಹೀಗಾಗಿ, ಇದು ಜುಲೈ 8 ರ ಸಾಮಾನ್ಯ ದಿನಾಂಕಕ್ಕೆ ಮುಂಚಿತವಾಗಿ (ಇಡೀ ಭಾರತವನ್ನು ಆವರಿಸುವ ಸಾಮಾನ್ಯ ದಿನಾಂಕಕ್ಕಿಂತ ಆರು ದಿನಗಳ ಮೊದಲು) ಜುಲೈ 2 2024 ರಂದೇ ಇಡೀ ದೇಶವನ್ನು ಆವರಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಡಿಕೆಗಿಂತ ಎರಡು ಮತ್ತು ಆರು ದಿನ ಮುಂಚಿತವಾಗಿ ಕೇರಳ ಮತ್ತು ಈಶಾನ್ಯ ಪ್ರದೇಶಕ್ಕೆ ಮೇ 30 ರಂದು ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದವು. ಇದು ಸಾಮಾನ್ಯವಾಗಿ ಮಹಾರಾಷ್ಟ್ರದವರೆಗೆ ಪ್ರಗತಿ ಸಾಧಿಸಿದ್ದು, ಆದರೆ ಬಳಿಕ ವೇಗ ಕಳೆದುಕೊಂಡಿತ್ತು. ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಮಳೆಯ ನಿರೀಕ್ಷೆಯನ್ನು ವಿಸ್ತರಿಸಿತು. 

   ಇನ್ನು ಜೂನ್ 11 ರಿಂದ ಜೂನ್ 27 ರವರೆಗೆ ದೇಶವು 16 ದಿನಗಳ ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಚಟುವಟಿಕೆಯನ್ನು ದಾಖಲಿಸಿದ್ದು, ಇದು ಜೂನ್‌ನಲ್ಲಿ ಒಟ್ಟಾರೆ ಸಾಮಾನ್ಯಕ್ಕಿಂತ ಕಡಿಮೆ ಮಳೆಗೆ ಕಾರಣವಾಯಿತು, ತಿಂಗಳಿಗೆ ಸಾಮಾನ್ಯ 165.3 ಮಿಮೀ ಬದಲಾಗಿ 147.2 ಮಿಮೀ ಮಳೆಯಾಗಿದೆ, ಇದು 2001 ರಿಂದ ಈ ವರೆಗೂ ಬಿದ್ದ ಒಟ್ಟಾರೆ ಮಳೆ ಋತುವಿನ ಏಳನೇ ಕಡಿಮೆ ಪ್ರಮಾಣದ ಮಳೆ ಋತುವಾಗಿದೆ. ದೇಶದಲ್ಲಿ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ದಾಖಲಾದ ಒಟ್ಟು 87 ಸೆಂ.ಮೀ ಮಳೆಯ ಶೇಕಡಾ 15 ರ ಜೂನ್ ಮಳೆಯಾಗಿದೆ.

   ಜುಲೈನಲ್ಲಿ ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಭಾರೀ ಮಳೆಯು ಪಶ್ಚಿಮ ಹಿಮಾಲಯ ರಾಜ್ಯಗಳಲ್ಲಿ ಮತ್ತು ದೇಶದ ಮಧ್ಯ ಭಾಗಗಳಲ್ಲಿ ನದಿ ಜಲಾನಯನ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap