ಬೆಂಗಳೂರು
ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿದ್ದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಧ್ಯಕ್ಷರು ಹಾಗೂ ಇತರರು ಸೇರಿ ಖಾಸಗಿ ವ್ಯಕ್ತಿಗಳಿಗೆ, ಟ್ರಸ್ಟ್ ಗಳಿಗೆ, ಖಾಸಗಿ ಕಾರ್ಖಾನೆಗಳಿಗೆ ಯಾವುದೇ ಭದ್ರತೆ ಇಲ್ಲದೇ ಸಾಲ ನೀಡಿದ್ದಾರೆ.
ಈ ಬೆಳವಣಿಗೆಯಿಂದ ಅಪೆಕ್ಸ್ ಬ್ಯಾಂಕ್ ದುಃಸ್ಥಿತಿಗೆ ತಲುಪಿದೆ.ನಬಾರ್ಡ್ ಕೂಡ ಅಪೆಕ್ಸ್ ಬ್ಯಾಂಕ್ ದುಸ್ಥಿತಿಯಲ್ಲಿದೆ ಎಂದು ಹೇಳಿದೆ.ರೈತ ಬ್ಯಾಂಕ್ ಆಗಿರುವ ಅಪೆಕ್ಸ್ ಬ್ಯಾಂಕ್ ರೈತರ ಬಡ್ಡಿ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ.ಇಷ್ಟೆಲ್ಲಾ ಹಗರಣ ಆಗಿದ್ದರೂ ಸಹ ಸದನದಲ್ಲಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ.ಸದನದಲ್ಲಿ ಸಿಕ್ಕ ಅಲ್ಪಸಮಯದಲ್ಲೇ ಎಲ್ಲವನ್ನೂ ಹೇಳಿದ್ದೇನೆ ಅದರೂ ಸಮರ್ಪಕ ಉತ್ತರವನ್ನೂ ಸರ್ಕಾರ ನೀಡುತ್ತಿಲ್ಲ.ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ದಾಖಲೆಯನ್ನು ಸ್ಪೀಕರ್ ಗೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಎರಡು ಸಾವಿರ ಕೋಟಿ ಸಾಲವನ್ನು ಯಾವುದೇ ಭದ್ರತೆ ಇಲ್ಲದೇ ಅಪೆಕ್ಸ್ ಬ್ಯಾಂಕ್ ನಿಂದ ಸಾಲ ನೀಡಲಾಗಿದೆ.ಸಹಕಾರಿ ಇಲಾಖೆ ನಿಬಂಧಕರೇ ಈ ಮಾಹಿತಿ ನೀಡಿದ್ದಾರೆ.ವಿದೇಶದಲ್ಲಿದ್ದವರಿಗೆ, ನೌಕರಿ ಯಿಂದ ತೆಗೆದು ಹಾಕಿದವರಿಗೆ ಸಾಲ ಕೊಟ್ಟಿದ್ದಾರೆ. ಪ್ರಕರಣಗಳಿಂದ ಬ್ಯಾಂಕ್ ಭಾರೀ ನಷ್ಟವಾಗಿದೆ ಎಂದು ಹೆಚ್.ಡಿ.ರೇವಣ್ಣ ಆರೋಪಿಸಿದರು. ಜೆಡಿಎಸ್ ಶಾಸಕ ಮಾಗಡಿ ಮಂಜು ಮಾತನಾಡಿ, ಅಪೆಕ್ಸ್ ಬ್ಯಾಂಕ್ ಹಗರಣದ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಕೇಳಿದ್ದರೂ ಸ್ಪೀಕರ್ ಸಂಪೂರ್ಣ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎರಡು ಸಾವಿರ ಕೋಟಿಯಷ್ಟು ಸಾಲವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದಾರೆ.940ಕೋಟಿಯಷ್ಟು ಎನ್.ಪಿ.ಎ ಆಗಿದೆ.ಅಪೆಕ್ಸ್ ಬ್ಯಾಂಕ್ ದಿವಾಳಿ ಅಂಚಿಗೆ ತಲುಪಿದೆ.ಯಾವುದೇ ಭದ್ರತೆ ಇಲ್ಲದೇ ಸಾಲವನ್ನು ನೀಡಲಾಗುತ್ತಿದೆ.ಇದೆಲ್ಲದಕ್ಕೂ ಸರ್ಕಾರ ಉತ್ತರ ನೀಡಲೇ ಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








