ಭಾರತದಲ್ಲಿ ಚೀನಾದಿಂದ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ..!

ನವದೆಹಲಿ

     ವಿಶ್ವದಲ್ಲಿ  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ  ಕೊರೊನಾ ಸೋಂಕಿತರ ಸಂಖ್ಯೆಯಿಂದ ತತ್ತರಿಸಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ  ಚೀನಾ ಸ್ಥಳಾಂತರಿಸ ಬಹುದಾದ ಆಸ್ಪತ್ರೆಯನ್ನು  ನಿರ್ಮಿಸಿ ಕೊಡುವುದಾಗಿ ಹೇಳಿದೆ.ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ವುಹಾನ್‌ನಲ್ಲಿ ಚೀನಾ ಚಿಕಿತ್ಸೆ ನೀಡಲು ಸ್ಥಳಾಂತರ ಮಾಡಬಹುದಾದ ಆಸ್ಪತ್ರೆ ನಿರ್ಮಾಣ ಮಾಡಿತ್ತು. ಚೀನಾದ ಈ ಕಾರ್ಯಕ್ಕೆ ವಿಶ್ವದ ವಿವಿಧ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.

      ಬೀಚಿಂಗ್ ನವದೆಹಲಿ ಜೊತೆ ಸಂಪರ್ಕದಲ್ಲಿದ್ದು ಕೊರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡುತ್ತಿದೆ. ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ ಚೀನಾ ಭಾರತಕ್ಕೆ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಿದೆ ಎಂದು ಹೇಳಿದೆದಕ್ಷಿಣ ಏ‍ಷ್ಯಾದ ದೇಶಗಳಿಗೆ ಈಗಾಗಲೇ ಚೀನಾದ ಕಂಪನಿಗಳು ಭೇಟಿ ನೀಡಿದ್ದು, ಸ್ಥಳಾಂತರ ಮಾಡಬಹುದಾದ ಆಸ್ಪತ್ರೆಗಳ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯರಿಗೆ ನೆರವಾಗಲಿವೆ. ಚೀನಾದ ಹಲವು ಉದ್ಯಮಿಗಳು ಭಾರತಕ್ಕೆ ದೇಣಿಗೆಯನ್ನು ನೀಡುತ್ತಿವೆ.

ಜಿ ರಾಂಗ್ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ವಕ್ತಾರೆ ಈ ಕುರಿತು ಮಾಹಿತಿ ನೀಡಿದ್ದಾರೆ. “ನಮ್ಮ ಶಕ್ತಿಗೆ ಅನುಗುಣವಾಗಿ ನಾವು ನೆರವು, ಸಹಾಯ ನೀಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.

ಚೀನಾದ ಹಲವಾರು ಕಂಪನಿಗಳು ಭಾರತದ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇವುಗಳನ್ನು ಬಳಸಿಕೊಂಡು ವುಹಾನ್ ಮಾದರಿಯಲ್ಲಿ ಸ್ಥಳಾಂತರ ಮಾಡಬಹುದಾದ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಚೀನಾ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link