ಟಿ20 ವಿಶ್ವಕಪ್  ಟೂರ್ನಿಗೆ ಕ್ಷಣಗಣನೆ ಆರಂಭ

ನವದೆಹಲಿ :

    ಟಿ20 ವಿಶ್ವಕಪ್  ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈಗತಾನೇ ಐಪಿಎಲ್ ಮುಗಿಸಿರುವ ಭಾರತ ತಂಡ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿದೆ.

    ಮುಂದಿನ ತಿಂಗಳಿನಿಂದ ಪಂದ್ಯಗಳು ಆರಂಭವಾಗಲಿವೆ. ಜೂನ್ 2 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗೂ ಮೊದಲು ಹಲವು ತಂಡಗಳು ಅಭ್ಯಾಸ ಪಂದ್ಯಗಳು ನಡೆಯುತ್ತವೆ.

    ಭಾರತ ತಂಡ ಒಂದೇ ಒಂದು ಅಭ್ಯಾಸ ಪಂದ್ಯ ಆಡಲಿದೆ. ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ  ಅಭ್ಯಾಸ ಪಂದ್ಯವನ್ನು ಆಡಲಿದೆ. ನಂತರ ಲೀಗ್ ಪಂದ್ಯಗಳು ಆರಂಭವಾಗಲಿವೆ.

    ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಕೆನಡಾ, ಐರ್ಲೆಂಡ್, ಪಾಕಿಸ್ತಾನ್, ಅಮೆರಿಕ ತಂಡಗಳು ಸ್ಥಾನ ಪಡೆದಿವೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 5 ರಂದು ರಾತ್ರಿ 8ಕ್ಕೆ ನಡೆಯಲಿದೆ. ಜೂನ್ 8 ರಂದು ಭಾರತ ಮತ್ತು ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಜೂನ್ 12 ರಂದು ಯುಎಸ್‌ಎ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap