ಹುಳಿಯಾರು
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ತುಮಕೂರು ಹಾಲು ಒಕ್ಕೂಟದಿಂದ ಹುಳಿಯಾರು ಪಪಂ ವ್ಯಾಪ್ತಿಯ 880 ಬಡ ಕುಟುಂಬಗಳಿಗೆ ಶುಕ್ರವಾರ ಬೆಳಿಗ್ಗೆ ತಲಾ ಒಂದು ಲೀಟರ್ ನಂದಿನಿ ಹಾಲನ್ನು ವಿತರಿಸಲಾಯಿತು.
ಇಲ್ಲಿನ ವಠಾರ, ಶಂಕರಾಪುರ ಬಡಾವಣೆಯ ಅಲೆಮಾರಿಗಳು, ಒಣಕಾಲುವೆ, ಕೇಶವಾ ಶಾಲೆ ಹಿಂಭಾಗ, ಆಜಾದ್ ನಗರ, ಎಕೆ ಮತ್ತು ಎಡಿ ಕಾಲೋನಿ, ವಳಗೆರೆಹಳ್ಳಿ, ವೈಎಸ್ ಪಾಳ್ಯದ ಹೊಸಬಡಾವಣೆ ಸೇರಿದಂತೆ ಪಟ್ಟಣದ ಬಡ ಮತ್ತು ಕೊಳೆಗೇರಿ ವಾಸಿಗಳಿಗೆ ಪಪಂ ಸಿಬ್ಬಂದಿ ಮನೆಮನೆಗೆ ತೆರಳಿ ಮನೆ ಮಾಲೀಕರ ಹೆಸರನ್ನು ಬರೆದುಕೊಂಡು ಹಾಲಿನ ಪ್ಯಾಕೆಟ್ ನೀಡಿದರು.
ಏಪ್ರಿಲ್ 14 ರ ವರೆವಿಗೆ ಈ ಹಾಲು ವಿತರಣೆ ಮಾಡಲಿದ್ದು ಪಪಂ ಸಿಬ್ಬಂದಿಗಳಾದ ವೆಂಕಟೇಶ್, ಕೃಷ್ಣಮೂರ್ತಿ, ರಾಘವೇಂದ್ರ, ಸರ್ಧಾರ್ ಸೇರಿದಂತೆ ಇತರರು ಈ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು ಬೆಳಗ್ಗೆ 6 ಗಂಟೆಯಿಂದಲೇ ಹಾಲು ವಿತರಣೆ ಮಾಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








