ಮಧುಗಿರಿ :

     ಮಾ.10 ರೊಳಗೆ ಹೇಮಾವತಿ ಜಲಾಶಯ ದ ನೀರನ್ನು ಸಿದ್ದಾಪುರದ ಕೆರೆಗೆ ಹರಿಸಲಾಗುವುದೆಂದು ಸಹಕಾರ ಸಚಿವ ರಾದ ಕೆ.ಎನ್ ರಾಜಣ್ಣ ನವರು ತಿಳಿಸಿದರು.ಪಟ್ಟಣದ ಚೋಳೆನೆಹಳ್ಳಿಯ ಕೆರೆ ಹಾಗೂ ಸಿದ್ದಾಪುರದ ಕೆರೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೆಲವು ಕಡೆ ನೀರಿನ ಅಭಾವ ಹೆಚ್ಚಾಗುತ್ಯಿರುವುದು ಕಂಡು ಬರುತ್ತಿದೆ.

    ನಾವು ಈ ಮೊದಲೆ ಕುಡಿಯುವ ನೀರಿಗೆ ಅಭಾವ ಆಗಬಹುದೆಂದು ಹೇಮಾವತಿ ನೀರನ್ನು ತಡೆದು ಇಟ್ಟು ಕೊಳ್ಳಲಾಗಿತ್ತು. ಈಗ ಅದೇ ನೀರನ್ನು ಅದ್ಯತೆಯ ಮೇರೆಗೆ ಜಿಲ್ಲೆಯ ಹಾಗೂ ಮಧುಗಿರಿ ಯ ಸಿದ್ದಾಪುರದ ಕೆರೆಗೆ ಹರಿಸಲಾಗುವುದು.

   ಚೋಳೆನಹಳ್ಳಿಯ ಕೆರೆಯಲ್ಲಿ ಇನ್ನೊಂದು ವಾರದಲ್ಲಿ ಇರುವ ನೀರು ಸಹ ಖಾಲಿಯಾಗಲಿದೆ ಕೆರೆಯ ಏರಿ ಸ್ವಲ್ಪ ಚಿಕ್ಕದಾಗಿದ್ದು ಅದಷ್ಟೂ ಬೇಗಾ ಏರಿ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಚೋಳೆನಹಳ್ಳಿಯ ಕೆರೆ ಕೋಡಿ ಕಾಮಗಾರಿ ಯನ್ನು ಈ ಹಿಂದೆ ಇದ್ದ ಅಧಿಕಾರಿಯೊಬ್ಬ ಅಪೂರ್ಣ ಗೊಳಿಸಿದ್ದರು , ಕಾಮಗಾರಿಗಳನ್ನು ಮಾಡುವಾಗ ಸ್ಥಳೀಯ ಗುತ್ತಿಗೆದಾರರಿಗೆ ನೀಡಿ ಹೊರ ಜಿಲ್ಲೆಯವರಿಗೆ ನೀಡಬೇಡಿ , ಸಿದ್ದಾಪುರದ ಕೆರೆಗೆ ಬಳ್ಳಾಪುರದ ಪಂಪ್ ಹೌಸ್ ನಿಂದ ಅದಷ್ಟೂ ನೀರು ಹರಿಸಲಾಗುವುದು ಎಂದು ತಿಳಿಸಿದರು.

   ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ , ಲೋಕೋಪಯೋಗಿ ಇ ಇ ಸುರೇಶ್ ರೆಡ್ಡಿ , ತಹಸೀಲ್ದಾರ್ ಸಿಗಬತ್ ವುಲ್ಲಾ ಮುಖ್ಯಾಧಿಕಾರಿ ಸುರೇಶ್ ,ಕೆಪಿಸಿಸಿ ಸದಸ್ಯ ರಂಗಶ್ಯಾಮಣ್ಣ , ಪುರಸಭಾ ಸದಸ್ಯರಾದ ಆಲೀಂ , ಶಂಕರನಾರಾಯಣ ಹಾಗೂ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ