ಹಾವೇರಿ :
ಜಿಲ್ಲೆಯ ಸವಣೂರ ತಾಲೂಕಿನ ಕಾರಡಗಿ ಜಿಲ್ಲಾ ಪಂಚಾಯತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಲ್ಲೂರಬಡ್ನಿ ಗ್ರಾಮದಲ್ಲಿ ಮಹಾಮಾರಿ ಕೋರೋನಾ ವೈರಸ್ ತಡೆಗಟ್ಟುವ ಮುನ್ನಚ್ಚೆರಿಕೆಯ ಕ್ರಮವಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಚಾಲಕರಾದ ಮಹಾಂತೇಶ ಎಸ್ ಸಾಲಿ ಹಾಗೂ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಯುವ ಮುಖಂಡರಾದ ರವಿ ಕರಿಗಾರ ಗ್ರಾಮ ಪಂಚಾಯತ ಸದಸ್ಯರಾದ ಹೂವಪ್ಪ ದೆವನೂರ ,ಬಸವರಾಜ ಗೌಳೇರ,ಬಸವರಾಜ ಲಕ್ಕುಂಡಿ ಸುನೀಲ್ ಲಮಾಣಿ ಯುವ ಮುಖಂಡರಾದ ಇಮಾಮಸಾಬ ನದಾಪ್ ರಮೇಶ ಪೂಜಾರ ನಿಂಗಪ್ಪ ಬಂಕಾಪುರ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ