ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳನ್ನು ಪಾಲಿಸಿ : ಸಿ ಎಂ

ಬೆಂಗಳೂರು

    ಹಸಿರು ಕ್ರಾಂತಿ ಹರಿಕಾರ , ಮಾಜಿ ಉಪಪ್ರಧಾನ ಮಂತ್ರಿಗಳಾದ ದಿ. ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳು, ವಿಚಾರಧಾರೆಗಳು ಎಂದೆಂದೂ ಮಾದರಿಯಾಗಿದ್ದು, ಅವರ ವಿಚಾರಧಾರೆಗಳನ್ನು ಯುವಪೀಳಿಗೆಯು ಅಧ್ಯಯನ ಮಾಡಿ, ಪಾಲಿಸಬೇಕು ಎಂದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಕರೆ ನೀಡಿದರು.

    ವಿಧಾನಸೌಧದ ಆವರಣದಲ್ಲಿರುವ ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಇಂದು ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ದೇಶದಲ್ಲಿ ಆಹಾರ ಸಮಸ್ಯೆ ತಲೆದೂರಿ ಜನತೆ ತಲ್ಲಣಗೊಂಡ ಸಂದರ್ಭದಲ್ಲಿ ಸುಧಾರಿತ ಬಿತ್ತನೆ ಬೀಜಗಳ ತಳಿಗಳನ್ನು ಬಳಕೆ ಮಾಡುವ ಮೂಲಕ ಹಸಿರು ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಿ, ಕ್ರಾಂತಿ ಮಾಡಿದರು.

      ಆಹಾರ ಉತ್ಪಾದನೆಯಲ್ಲಿ ಅಪರಿಮಿತ ಸಾಧನೆಗೈದರು. ಇದರಿಂದ ಜನತೆಯ ಹಸಿವನ್ನು ನೀಗಿಸಲಾಯಿತು. ಡಾ. ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೇ ಹೆಸರುವಾಸಿಯಾದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾಗಿ ಮಾಡಿದ ಸಾಧನೆ ಉಲ್ಲೇಖನೀಯವಾದುದು. ರೈತ ಮತ್ತು ಯೋಧ ಇವರ ಸಲುವಾಗಿ ಅವರು ಶ್ರಮಿಸಿದ ಶ್ರಮ ಅಪರಿಮಿತವಾದುದು.

      ಕೃಷಿ, ರಕ್ಷಣಾ ವಲಯದಲ್ಲಿ ಅವರ ಮಾರ್ಗದರ್ಶನ, ನಾಯಕತ್ವ ಅವಿಸ್ಮರಣೀಯವಾದುದು. ಅವರು ದೇಶ ಕಂಡ ಅಪರೂಪದ ರಾಷ್ಟ್ರ ನಾಯಕರಾಗಿದ್ದಾರೆ. ಅವರು ಶೋಷಿತರ ಹಕ್ಕಿಗಾಗಿ ನಿರಂತರ ಶ್ರಮವಹಿಸಿ, ಶೋಷಿತರ ಏಳಿಗಾಗಿ ಅಪಾರವಾಗಿ ಶ್ರಮಿಸಿ ಶೋಷಿತರ ಆಶಾಕಿರಣವಾಗಿದ್ದಾರೆ. ಯುವ ಪೀಳಿಗೆಯು ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅನುಸರಿಸಬೇಕು. ಅವರ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

     ಉಪಮುಖ್ಯಮಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ, ವಸತಿ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಂಸದ ಶ್ರೀ ನಾರಾಯಣ ಸ್ವಾಮಿ, ಮಾಜಿ ಸಚಿವ ಶ್ರೀ ಹೆಚ್. ಆಂಜನೇಯ, ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀ ಟಿ.ಎಂ. ವಿಜಯಬಾಸ್ಕರ್,ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ ನಾಯಕ್, ಸಲಹೆಗಾರರಾದ ಶ್ರೀ ಇ. ವೆಂಕಟಯ್ಯ, ಆಯುಕ್ತರಾದ ಶ್ರೀ ಪೆದ್ದಪ್ಪಯ್ಯ, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಅನಿಲ್ ಕುಮಾರ್, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್. ನಟರಾಜ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀ ಸಂಗಪ್ಪ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಘವೇಂದ್ರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಮಗದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಹನುಮನರಸಯ್ಯ, ಉಪಮುಖ್ಯಮಂತ್ರಿಯರವ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ, ಅಪರ ನಿರ್ದೇಶರಾದ ಶ್ರೀ ನಾಗೇಶ್ ಮತ್ತು ಶ್ರೀಮತಿ ಸತ್ಯಶ್ರೀ, ವಿವಿಧ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link