ಪಾವಗಡ
ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಅನಾವೃಷ್ಟಿಯಿಂದ ಇಲ್ಲಿನ ರೈತರು ಹಾಗೂ ಕೂಲಿ ಕಾರ್ಮಿಕರು ನೊಂದು ಬೆಂದಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಖುಷ್ಕಿ ಜಮೀನನ್ನು ನಂಬಿ ಶೇಂಗಾ ಬೆಳೆ ಇಡುತ್ತಿದ್ದರು. ಮಳೆ ಇಲ್ಲದೆ ಬೆಳೆಯಾಗದೆ ಅದನ್ನು ಕೈಬಿಟ್ಟರು. ಕೊಳವೆ ಬಾವಿಯ ನೀರಾವರಿಯಿಂದ ತೋಟಗಾರಿಕೆ ಬೆಳೆಗಳಾದ ಖರ್ಬುಜ, ಕಲ್ಲಂಗಡಿ, ಟೋಮೊಟೊ, ಬಾಳೆ, ಪಪಾಯಿ, ಹೂವು ವಿವಿಧÀ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಆದರೆ ಇದೀಗ ಆರ್ಥಿಕವಾಗಿ ಚೇತರಿಸಿಕೊಳ್ಳ್ಳುವ ಹಂತದಲ್ಲಿ ಸರಿಯಾಗಿ ಕೊರೊನಾ ವೈರಸ್‍ನಿಂದ 21 ದಿನಗಳ ಕಾಲ ಭಾರತ್ ಲಾಕ್ ಡೌನ್ ಆಯಿತು. ಈ ಹಿನ್ನೆಲೆಯಲ್ಲಿ ಸಂಚಾರ ಬಂದ್ ಆಗಿ, ಮಾರುಕಟ್ಟೆ ವಹಿವಾಟು ಇಲ್ಲವಾಗಿ, ರೈತರು ಬೆಳೆದ ಕಲ್ಲಂಗಡಿ ಮತ್ತು ಕರಬುಜ ಹಾಗೂ ಟೊಮಾಟೊ ಹೊಲದಲ್ಲಿ ಕೊಳೆತು ಹಾಳಾಗಿದೆ.
ತಾಲ್ಲೂಕಿನ ಗೋರ್ಸ್‍ಮಾವು ಗ್ರಾಮದ ರೈತ ಚೆÀನ್ನಪ್ಪಯ್ಯ ನಾಲ್ಕು ಎಕರೆಯಲ್ಲಿ ಕರಬುಜ ಬೆಳೆ ಇಟ್ಟಿದ್ದು, ಫಸಲು ಚೆನ್ನಾಗಿಯೆ ಬಂದಿದೆ. ಆದರೆ ಲಾಕ್‍ಡೌನ್‍ನಿಂದ ಹೊಲದಲ್ಲಿ ಕೊಳೆಯುವಂತಾಗಿದೆ. ಇತ್ತೀಚೆಗೆ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಯಾರೂ ಅಡ್ಡಿ ಪಡಿಸಬಾರದೆಂದು ಸರ್ಕಾರ ಆದೇಶ ನೀಡಿದೆ. ಆದರೆ ಪ್ರತಿಫಲ ವಿಲ್ಲದಂತಾಗಿದೆ. ಏಕೆಂದರೆ ಸರ್ಕಾರ ಆದೇಶ ನೀಡುವ ಮೊದಲೆ ಫÀಸಲು ಕಟಾವಿಗೆ ಬಂದಿತ್ತು. ಕರಬುಜ ಬೆಳೆಯನ್ನು ಅರವತ್ತು ದಿನಗಳ ನಂತರ ಕಟಾವು ಮಾಡಬೇಕು.
ಬೆಳೆ ಕಟಾವು ಅವಧಿ ಮುಗಿದ ಮೇಲೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದೆಂದು ಅನುಮತಿ ಕೊಟ್ಟರೂ ಅನುಕೂಲವಾಗದೆ ನಷ್ಟ ಉಂಟಾಯಿತು ಎಂದು ರೈತ ಚೆನ್ನಪ್ಪಯ್ಯ ಅಲವತ್ತುಕೊಳ್ಳುತ್ತಿದ್ದಾರೆ. 4 ಎಕರೆ ಕರಬುಜ ಬೆಳೆಗೆ 3 ಲಕ್ಷ ರೂ. ಖರ್ಚು ಆಗಿದ್ದು, ಇನ್ನು ಉಳಿದ ಪೈಪ್ ಲೈನ್ ಮತ್ತು ಡ್ರಿಪ್ ಮಾಡಿಸಲು 1.50 ಲಕ್ಷ ರೂ. ಖರ್ಚು ಆಗಿದೆ. ಖರ್ಚು ಮಾಡಿದ ಹಣ ಸಹ ಹುಟ್ಟುವಳಿ ಆಗದೆ ಸಾಲಕ್ಕೆ ತುತ್ತಾಗಿದ್ದೇನೆ. ಸರ್ಕಾರ ಬೆಳೆ ನಷ್ಟ ಪರಿಹಾರ ಕಲ್ಪಿಸಿದರೆ ನನ್ನ ಜೀವನ ಸುಧರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಚೆನ್ನಪ್ಪಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲಿಗಾನಹಳ್ಳಿ ಸರ್ವೆ ನಂಬರ್ 61/2ಎ ಮೂರುವರೆ ಎಕರೆಯಲ್ಲಿ ರೈತ ನಾಗರಾಜು ಕರಬುಜ ಬೆಳೆದು, ರಾತ್ರಿ ಹಗಲು ಎನ್ನದೇ ಕಷ್ಟ್ಟ ಪಟ್ಟು ಬೆಳೆ ತೆಗೆದರೂ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸುಮಾರು 2.50 ಲಕ್ಷ ರೂ. ಖರ್ಚು ಬಂದಿದೆ. ಫಸಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಹೊಲದಲ್ಲಿ ಬಿಟ್ಟು ಬಿಟ್ಟೆ.
ಅಕ್ಕ ಪಕ್ಕ ಹಳ್ಳಿಯ ಜನರು ಉಚಿತವಾಗಿ ಹಣ್ಣು ತಿಂದಿದ್ದಾರೆ. ಹೊಲದಲ್ಲಿ ಹಾಳಾಗುವುದು ಬೇಡ ಜನರಾದರು ತಿನ್ನಲಿ ಎಂದು ಕೈಬಿಟ್ಟಿದ್ದೇನೆ. ಸುಮಾರು ವರ್ಷಗಳಿಂದ ಶೇಂಗಾ ಬೆಳೆ ಇಟ್ಟು 3-4 ಲಕ್ಷ ರೂ. ಸಾಲ ಮಾಡಿದ್ದೆ. ನೀರಾವರಿ ಬೆಳೆಯನ್ನಾದರು ಬೆಳೆಯೋಣ ಎಂದು ಕೊಳವೆ ಬಾವಿ ಕೊರೆÀಸಿ ಫÀಸಲು ಬೆಳೆದರೂ ಕೊರೊನಾ ವೈರಸ್‍ನಿಂದ ನಷ್ಟ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ಹೊಲದಲ್ಲಿ ಇಟ್ಟ ಬೆಳೆಯನ್ನು ತನಿಖೆ ನಡೆಸಿ, ಸರ್ಕಾರದ ಗಮನಕ್ಕೆ ತಂದು ಬೆಳೆ ನಷ್ಟ ಪರಿಹಾರ ಕೊಡಿಸಬೇಕೆಂದು ರೈತ ಕುರುಬರಹಳ್ಳಿ ನಾಗರಾಜು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಮದ್ದಿಬಂಡೆ ಗ್ರಾಮದ ಸ.ನಂ.48/ಟಿ1 ರಲ್ಲಿ 3 ಎಕರೆಯಲ್ಲಿ ಕಲ್ಲುಂಗಡಿ ಬೆಳೆ ಇಟ್ಟಿದ್ದು, ಬೆಳೆಯನ್ನು ಸಹ ಉತ್ತಮವಾಗಿ ಬೆಳೆದರೂ ಪ್ರಯೋಜನವಿಲ್ಲ. ಕಲ್ಲಂಗಡಿ 40 ದಿನಗಳ ಬೆಳೆ. ಆದರೆ ಕೊರೊನಾ ವೈರಸ್‍ನಿಂದ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಹೊಲದಲ್ಲೆ ಕೊಳೆಯುತ್ತಿದೆ. ಬೆಳೆ ಬಂದು ಈಗಾಗಲೆ ಎರಡೂವರೆ ತಿಂಗಳಾಗುತ್ತಿದೆ.
ಈಗ ಮಾರುಕಟ್ಟೆಗೆ ಕೊಂಡೊಯ್ದರೂ ಮಾರಾಟವಾಗುವುದಿಲ್ಲ. ಪಾವಗಡ ಹಾಗೂ ಸುತ್ತ ಮುತ್ತ ಹಳ್ಳಿಯಲ್ಲಿ ಮಾರಾಟ ಮಾಡೋಣ ಅಂದರೂ ಸಹ ಹಳ್ಳಿಯ ಜನರು ರಸ್ತೆಗಳಿಗೆ ಬೇಲಿ ಹಾಕಿ ಗ್ರಾಮದೊಳಗೆ ಬರಬಾರದೆಂದು ದಿಗ್ಬಂಧನ ಮಾಡಿದರು. ಏನು ಮಾಡಬೇಕೆಂದು ತೋಚದೆ ಫಸಲನ್ನು ಹೊಲದಲ್ಲಿ ಹಾಗೆಯೆ ಬಿಟ್ಟಿದ್ದೇವೆ ಎಂದು ರೈತ ವೆಂಕಟೇಶಪ್ಪ ದುಃಖ ತೋಡಿಕೊಂಡರು.
ಅವರ ಜಮೀನಿನಲ್ಲಿ ನೀರು ಬರದಿದ್ದರು ಬೇರೆ ರೈತರ ಕೊಳವೆ ಬಾವಿಯಿಂದ ನೀರು ಬಿಡಿಸಿಕೊಂಡು ಬೆಳೆ ಬೆಳೆದಿದ್ದಾರೆ. ಮಹಾಮಾರಿ ಕೊರೊನಾ ವೈರಸ್‍ನಿಂದ ನಷ್ಟವಾಗಿದೆ. ಬೆಳೆಯಿಡಲು 4 ಲಕ್ಷ ಖರ್ಚು ಬಂದಿದೆ. ನಮ್ಮ ಹೊಲ ಬೆಟ್ಟದ ಪಕ್ಕದಲ್ಲಿ ಇದ್ದು, ರಾತ್ರಿ ಕರಡಿ ಕಾಟ, ಪ್ರಾಣ ಹೋದರೂ ಚಿಂತೆಯಿಲ್ಲ, ಬೆಳೆಯನ್ನು ಕಾಪಾಡ ಬೇಕೆಂದು ರಾತ್ರಿ ಹೊತ್ತಿನಲ್ಲಿ 3-4 ಜನ ಕಾವಲು ಇರುತ್ತಿದ್ದೇವೆ ಎಂದು ಅವರು ತಿಳಿಸಿದರು.
ತಾಲ್ಲೂಕಿನ ರೈತರು ಇಷ್ಟೊಂದು ಕಷ್ಟಪಟ್ಟು ಬೆಳೆಯನ್ನು ತೆಗೆದರೆ, ಕೊರೊನಾ ವೈರಸ್ ನಿಂದ ಬೆಳೆ ನಷ್ಟವಾಗಿದೆ. ಸರ್ಕಾರ ಇಂತಹ ರೈತರಿಗೆ ಪರಿಹಾರ ಕಲ್ಪಿಸಿದರೆ ರೈತರು ಬದುಕಿ, ಉಳಿಯುತ್ತೇವೆ ಎಂದು ರೈತ ಒತ್ತಾಯಿಸಿದ್ದಾರೆ.ಪಾವಗಡ ತಾಲ್ಲೂಕಿನಲ್ಲಿ ತೊಟಗಾರಿಕೆ ಬೆಳೆಗಳಾದ ಕಲ್ಲುಂಗಡಿ, ಕರಬುಜ, ಪಪಾಯಿ, ದಾಳಿಂಬೆ, ಬಾಳೆ ಹಾಗೂ ತರಿಕಾರಿ ಬೆಳೆಗಳಾದ ಟೊಮಾಟೊ, ಬದನೆ, ಸೊಪ್ಪು ವಿವಿಧÀ ತರಿಕಾರಿ ಬೆಳೆಗಳು ಲಾಕ್ ಡೌನ್ ಮಾರುಕಟ್ಟೆಯಿಲ್ಲದೆ ರೈತರು ಪರದಾಡುವಂತಾಗಿದೆ. ನಷ್ಟ ಉಂಟಾಗಿರುವ ರೈತರಿಗೆ ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡಬೇಕೆಂದು ತಾಲ್ಲೂಕು ರೈತ ಸಂಘ ಒತ್ತಾಯಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ