ಮಧುಗಿರಿ :
ಎಲ್ ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಯಾಗುತ್ತಿದ್ದಂತೆ ಜಿಲ್ಲೆಯ ತ್ರಿವಿಧ ದಾಸೋಹಿ ಪರಮ ಪೂಜ್ಯ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವಂತೆ ಎಂಎಲ್ ಸಿ ರಾಜೇಂದ್ರ ರಾಜಣ್ಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೋಟಗಾರಲಹಳ್ಳಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ,
ಶಿವಕುಮಾರ ಸ್ವಾಮೀಜಿಗಳ ಕೆಲಸ ಸಾಧನೆ ನೋಡಿ ಭಾರತ ರತ್ನ ಕೊಡಬೇಕು ,ಎಲ್ ಕೆ ಅಡ್ವಾಣಿ ಅವರು ಬಹಳ ಹಿರಿಯ ರಾಜಕಾರಣಿ,ಮಾಜಿ ಉಪಪ್ರಧಾನಿಗಳಾಗಿದ್ದವರು ಅವರನ್ನ ಗುರುತಿಸಿ ಹಿರಿಯರಿದ್ದಾರೆಂದು ಅವರ ಪಕ್ಷ ವು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಆದರೆ ನಮ್ಮ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಮುಖ್ಯಮಂತ್ರಿಗಳು ಕೇಳಿಕೊಂಡಿದ್ರು ಆದರೆ ಇನ್ನು ಕೊಡೋಕೆ ಆಗಿಲ್ಲ, ಅದೇನಕ್ಕೆ ಕೊಡೋಕೆ ಆಗಿಲ್ಲ ಅನ್ನೊದನ್ನ ನಾನು ಹೇಳಲ್ಲ ಶಿವಕುಮಾರ ಸ್ವಾಮೀಜಿಗಳು ಸಿದ್ದಗಂಗಾ ಮಠದ ಮೂಲಕ ಮಕ್ಕಳಿಗೆ ಉಚಿತ ಶಿಕ್ಷಣ, ಊಟ ಕೊಟ್ಟಿದ್ದಾರೆ, ಇನ್ನು ಹೆಚ್ಚು ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಠದ ವತಿಯಿಂದ ಮಾಡಿದ್ದಾರೆ. ಆ ಗೌರವವನ್ನು ಇಂದೂ ಭಾರತ ಸರ್ಕಾರ ನೀಡಬೇಕಾಗಿದೆ.
ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಸರ್ಕಾರದ ಪರ ಹಾಗೂ ನನ್ನ ವೈಯಕ್ತಿಕವಾಗಿ ಭಾರತ ರತ್ನ ನೀಡುವಂತೆ ಸರ್ಕಾರವನ್ನ ಒತ್ತಾಯಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ