ಹೊಸ ಮಠದಲ್ಲಿ ಮಾಸ್ಕ್ ವಿತರಣೆ

ಹಾವೇರಿ

    ನಗರದ ಶ್ರೀ ಹೊಸಮಠದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಭಾವಚಿತ್ರಕ್ಕೆ ಶ್ರೀ ಬಸವಶಾಂತಲಿಂಗ ಶ್ರೀಗಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತದೆ.

    ಈ ಸಂದರ್ಭದಲ್ಲಿ ಮಾಸ್ಕ್ ವಿತರಣೆ ಮಾಡಿ.ಸಮಾಜಿಕ ಅಂತರ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಂತರ ಮಾತನಾಡಿದ ಶ್ರೀಗಳು ಅಕ್ಕಮಹಾದೇವಿ ತಮ್ಮ ವಚನದಲ್ಲಿ ಲೋಕದ ಎಲ್ಲ ಕ್ರಿಯೆಗಳಿಗೆ ಸೂರ್ಯನೇ ಬೀಜವಾಗಿದ್ದಾನೆ. ಸೂರ್ಯನ ಉದಯ ಹಾಗೂ ಅಸ್ತಮಾನಗಳೆರಡೂ ಜಗತ್ತಿನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಸೂರ್ಯನ ಉದಯವು ಜಗದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಸೂರ್ಯನ ಬೆಳಕಿನಲ್ಲಿ ಸಕಲ ಜೀವಿಗಳ ಬದುಕು ಮತ್ತು ಭವಿಷ್ಯವಡಗಿದೆ.

    ಅಂದು ಸಹಸ್ರಾರು ವರ್ಷಗಳಿಂದ ಬಂಧನದಲ್ಲಿ ಬಾಳುತ್ತಿದ್ದ ಸ್ತ್ರೀ ಕುಲಕ್ಕೆ ಗೌರವದ ಸ್ಥಾನಮಾನ ತಂದುಕೊಡುವುದು ಮುಖಾಂತರ ಮಹಿಳೆಯರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲಳು ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ ಧೀರ ಮಹಿಳೆ ಅಕ್ಕಮಹಾದೇವಿ. ಸಮಸ್ತ ಮಹಿಳಾ ಕುಲಕ್ಕೆ ಭಾಗ್ಯದ ಬೆಳಕನ್ನು ಹರಿಸಿದ ಶುಭೋದಯ. ಪುಣ್ಯ ಮಾಡಿ ಸತ್ತವರೆಲ್ಲ ಚುಕ್ಕೆಗಳಾಗುತ್ತಾರೆ. ಎಂಬುದೊಂದು ಜಾನಪದ ನಂಬಿಕೆ. ಈ ನಂಬಿಕೆಯನ್ನು ಮೀರಿ ಸೂರ್ಯ- ಚಂದ್ರರಂತೆ ಮಿಂಚಿದಳು ಅಕ್ಕಮಹಾದೇವಿ. ಸಾಮಾಜಿಕ. ಧಾರ್ಮಿಕ .ಸಾಂಸ್ಕೃತಿಕ. ಸಾಹಿತ್ಯಿಕ.ಹೀಗೆ ಎಲ್ಲ ವಲಯಗಳಲ್ಲಿ ಸ್ತ್ರೀತ್ವವನ್ನು ಬಿಂಬಿಸಿದ.

    ಮಹಿಳಾ ಸಮಾಜದ ಮೇರುಪರ್ವತವಾಗಿ ಬೆಳಗಿದಳು .ಓಡುವ ಮನಸ್ಸನ್ನು ನಿಲ್ಲಿಸಿದ ಅಕ್ಕ ನಿರಾಕಾರ ದೇವನ ಸತಿಯಾದಳು ಎಂದು ಹೊಸಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಶ್ರೀಮತಿ ಕಮಲಾ ಬುಕ್ಕಶೇಟ್ಟಿ.ಶ್ರೀಮತಿ ಸುನೀತಾ ಮಠದ.ಶ್ರೀಮತಿ ನಾಗವೇಣಿ ಮುಂದಲಮನಿ.ಸುಜ್ಞಾನಿದೇವಿ ಮಠ ಅನೇಕರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link