ಬೆಂಗಳೂರು:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯರು ಮತ್ತು ಆರೋಗ್ಯ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ “ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಇನ್ಶ್ಯೂರೆನ್ಸ್ ಸ್ಕೀಮ್ ಫಾರ್ ಹೆಲ್ತ್ ವರ್ಕರ್ಸ್ ಫೈಟಿಂಗ್ ಕೋವಿಡ್-19”ಸಂಬಂಧ ಸುತ್ತೋಲೆ ಹೊರಡಿಸಿದೆ. ಇದು ಕೊರೋನಾವೈರಸ್ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ರಕ್ಷಣೆಯನ್ನು ನೀಡುತ್ತದೆ
ಕೊರೋನಾ ವೈರಸ್ ಕಾರಣಕ್ಕಾಗಿ ಆಕಸ್ಮಿಕ ಪ್ರಾಣಹಾನಿ, ಹಾಗೆಯೇ ಕೊರೋನಾ ಸಂಬಂಧಿತ ಕೆಲಸದಲ್ಲಿದ್ದಾಗ ಸಂಭವಿಸುವ ಆಕಸ್ಮಿಕ ಸಾವಿಗೆ ವಿಮಾ ರಕ್ಷಣೆ ಒದಗಿಸುವ ಪ್ರಸ್ತಾವನೆ ಇಲ್ಲಿದೆ.. “ಸೇವೆಯ ಸಮಯದಲ್ಲಿ ಯಾವುದೇ ವ್ಯಕ್ತಿ ಸತ್ತರೆ, ಅವರ ಕುಟುಂಬದವರಿಗೆ 50 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು. ” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.