ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ ಎನ್ ಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ದೀಡಿರ್ ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು ರೇಷನ್ ಕಾರ್ಡ್ ಇಲ್ಲದ ಅವರಿಗೂ ಕೂಡ ರೇಷನ್ ಕೊಡುವ ವ್ಯವಸ್ಥೆಯನ್ನು ಸರ್ಕಾರದ ಗಮನಕ್ಕೆ ತಂದು ವಿತರಿಸಲಾಗುತ್ತದೆ ಎಂದರು.
ಪ್ರತಿ ಹಳ್ಳಿಗಳಲ್ಲಿ ಎಷ್ವು ಜನ ಇದ್ದಾರೆ ಎಂದು ನಮ್ಮ ಗ್ರಾಮಲೆಕ್ಕಾಧಿಕಾರಿಗೆ ತಿಳಿಸಿದ್ದಾನೆ ಅವರು ಪಟ್ಟಿ ಮಾಡಿ ಕೊಟ್ಟ ಮೇಲೆ ಅದನ್ನು ಸರ್ಕಾರದ ಗಮನಕ್ಕೆ ತಂದು ರೇಷನ್ ಕೊಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.ನಮ್ಮ ತಾಲ್ಲೂಕಿನಲ್ಲಿ ಸಾಕಷ್ವು ಜನಕ್ಕೆ ಕಾರ್ಡ್ ಇಲ್ಲ ಆದ್ದರಿಂದ ಎಲ್ಕರಿಗೂ ರೇಷನ್ ಕೊಡುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ರೇಷನ್ ಕಾರ್ಡ್ ನಲ್ಲಿ ಓಟಿಪಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಸರ್ಕಾರಕ್ಕೆ ಎಷ್ವು ಪಡಿತರ ಆಹಾರವನ್ನು ಸರಬರಾಜು ಮಾಡಲಾಗಿದೆ ಎಂಬುದು ವರದಿ ತಿಳಿಯುತ್ತದೆ ಆದ್ದರಿಂದ ಓಟಿಪಿ ಕಡ್ಡಾಯ ಎಂದು ತಿಳಿಸಿದರು.ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಹಾಲು ಹಾಕಬೇಕಾದರೆ ಸಾಮಾಜಿಕ ಅಂತರವನ್ನು ಕಾಯ್ದಕೊಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ