ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಘಟಕ ಸ್ಥಾಪನೆ

ತುಮಕೂರು

    ಜನಜಂಗುಳಿ ಸೇರುವ ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಘಟಕ ಸ್ಥಾಪಿಸಲಾಗಿದೆ. ಮಾರುಕಟ್ಟೆ ಪ್ರವೇಶಿಸುವವರ ಮೇಲೆ ಸೋಂಕು ನಿವಾರಕ ಘಟಕದಿಂದ ಸ್ಯಾನಿಟೈಸರ್ ಮಿಶ್ರಿತ ದ್ರಾವಣ ಸಿಂಪರಣೆಯಾಗುತ್ತದೆ. ಇದರಿಂದ ಮೈಮೇಲೆ ಅಂಟಿದ್ದರೆ ನಿಷ್ಕ್ರಿಯಗೊಳಿಸುತ್ತದೆ. ನಗರದ ಎಸ್‍ಐಟಿ ಕಾಲೇಜಿನ ಬಯೋಟೆಕ್ನಾಲಜಿ ಇಂಜಿನಿಯರ್‍ಗಳಾದ ಚಿದಾನಂದ್, ಪುರುಷೋತ್ತಮ್, ಅಕ್ಷಯ್ ಹಾಗೂ ವಿನಯ್ ಅವರ ತಂಡ ಸೋಂಕು ನಿವಾರಕ ಘಟಕ ಆವಿಷ್ಕರಿಸಿ ಮಹಾನಗರ ಪಾಲಿಕೆಗೆ ನೀಡಿದ್ದಾರೆ.

   ನಗರ ಪಾಲಿಕೆ ಮೇಯರ್ ಫರೀದಾಬೇಗಂ ಅವರು ಭಾನುವಾರ ಸೋಂಕು ನಿವಾರಕ ಘಟಕಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮೇಯರ್, ನೂತನವಾಗಿ ಸ್ಥಾಪಿಸಲಾಗಿರುವ ಸೋಂಕು ನಿವಾರಕ ಘಟಕದ ಒಳಗಡೆಯಿಂದ ಮಾರುಕಟ್ಟೆ ಪ್ರವೇಶಿಸಿದರೆ ಇದರಲ್ಲಿರುವ ಸ್ಯಾನಿಟೈಸರ್ ಮಿಶ್ರಿತ ದ್ರಾವಣ ನಮ್ಮ ಮೈಮೇಲೆ ಸಿಂಪಡಣೆಯಾಗಿ ವೈರಸ್‍ನಿಂದ ನಮ್ಮನ್ನು ರಕ್ಷಿಸುತ್ತದೆ. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಈ ಘಟಕದ ಒಳಗಿನಿಂದ ಪ್ರವೇಶ ಮಾಡಬೇಕು. ಹೀಗೆ ಮಾಡಿದರೆ ಮಾರುಕಟ್ಟೆಯಿಂದ ಯಾವುದೇ ರೀತಿಯ ಸೋಂಕು ಇಲ್ಲದಂತೆ ಮನೆಗೆ ನೆಮ್ಮದಿಯಾಗಿ ತೆರಳಬಹುದಾಗಿದೆ ಎಂದು ಅವರು ತಿಳಿಸಿದರು.

    ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಈ ಮಾರಕ ವೈರಸ್ ತಡೆಗೆ ಸಹಕರಿಸಬೇಕು. ಇಲ್ಲದಿದ್ದರೆ ಇಡೀ ವಿಶ್ವವೇ ಅಪಾಯ ಎದುರಿಸುವಂತಹ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದರು. ಪಾಲಿಕೆ ಆಯುಕ್ತ ಟಿ. ಭೂಬಾಲನ್ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಅತಿ ಹೆಚ್ಚಾಗಿ ಸೇರುವ ಜಾಗ ಈ ಮಾರುಕಟ್ಟೆಯಾಗಿದೆ. ಆದ್ದರಿಂದ ಈ ಸ್ಥಳದಲ್ಲಿ ಜನಸಾಮಾನ್ಯರ ಸುರಕ್ಷತೆಗಾಗಿ ಎಸ್‍ಐಟಿ ಕಾಲೇಜಿನ ಬಯೋಟೆಕ್ನಾಲಜಿ ಇಂಜಿನಿಯರ್‍ಗಳಾದ ಚಿದಾನಂದ್, ಪುರುμÉೂೀತ್ತಮ್, ಅಕ್ಷಯ್ ಹಾಗೂ ವಿನಯ್ ಅವರನ್ನೊಳಗೊಂಡ ತಂಡ ಈ ನೂತನ ಆವಿμÁ್ಕರ ಮಾಡಿ ಘಟಕ ಸ್ಥಾಪಿಸಿದ್ದಾರೆ. ಈ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

    ಮಾರುಕಟ್ಟೆಗೆ ಬರುವ ಜನಸಾಮಾನ್ಯರು ಸಹ ಈ ಘಟಕದ ಸೌಲಭ್ಯ ಉಪಯೋಗಿಸಿಕೊಳ್ಳಬೇಕು ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರ ಬರಬಾರದು. ಅಗತ್ಯ ಬಿದ್ದ ಸಂದರ್ಭದಲ್ಲಿ ಹೊರಗೆ ಬಂದ ಜನ ಸಾಮಾಜಿಕ ಅಂತರವನ್ನು ಪಾಲಿಸಲೇಬೇಕು ಎಂದು ಅವರು ತಿಳಿಸಿದರು.

     ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ನರಸಿಂಹಮೂರ್ತಿ, ಸದಸ್ಯ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ವಾಸುದೇವ್, ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ, ಮೃತ್ಯುಂಜಯ, ಮೋಹನ್, ಆರೋಗ್ಯ ನಿರೀಕ್ಷಕರಾದ ಮನೋಹರ್, ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link