ಅಪಘಾತ : ಸ್ಥಳದಲ್ಲೇ ದಂಪತಿಗಳಿಬ್ಬರ ದುರ್ಮರಣ!!

 ತುರುವೇಕೆರೆ :

      ಟಾಟಾಏಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್‍ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಮರಣ ಹೊಂದಿದ ಘಟನೆ ತಾಲ್ಲೂಕಿನ ತೋವಿನಕೆರೆ ಸಮೀಪ ಗುರುವಾರ ಮಧ್ಯಾಹ್ನ ನಡೆದಿದೆ.

      ದಂಡಿನಶಿವರ ಹೋಬಳಿ ಸಂಪಿಗೆ ಗ್ರಾ.ಪಂ.ವ್ಯಾಪ್ತಿಯ ಮಾಸ್ತಿಗೊಂಡನಹಳ್ಳಿ ಗ್ರಾಮದ ಸಿದ್ದರಾಮಯ್ಯ(55) ಹಾಗೂ ಅವರ ಪತ್ನಿ ದ್ರಾಕ್ಷಾಯಣಮ್ಮ(50) ಮೃತ ದುರ್ದೈವಿಗಳಾಗಿದ್ದು, ಗುರುವಾರ 11 ಗಂಟೆ ಸಮಯದಲ್ಲಿ ದಂಪತಿಗಳಿಬ್ಬರು ತಮ್ಮ ಗ್ರಾಮದಿಂದ ಸ್ಕೂಟರ್‍ನಲ್ಲಿ ತುರುವೇಕೆರೆಗೆ ಬರುತ್ತಿದ್ದ ಸಂದರ್ಭದಲ್ಲಿ ತೋವಿನಕೆರೆ ಸಮೀಪದ ಹೇಮಾವತಿ ನಾಲೆಯ ಸೇತುವೆ ಬಳಿ ಎದುರಿನಿಂದ ಬಂದÀ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿ ಸ್ಕೂಟರ್‍ನಲ್ಲಿದ್ದ ದಂಪತಿಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ವಗ್ರಾಮದ ಶ್ರೀ ಬಸವೇಶ್ವರ ದೇವಾಸ್ಥಾನದ ಅರ್ಚಕರಾಗಿದ್ದ ಇವರಿಗೆ ಮೂವರು ಪುತ್ರಿಯರಿದ್ದು, ಎರಡು ಹೆಣ್ಣುಮಕ್ಕಳನ್ನು ಈಗಾಗಲೇ ಮದುವೆಮಾಡಿಕೊಟ್ಟಿದ್ದು ಮತ್ತೊಬ್ಬ ಪುತ್ರಿ ಇದೀಗ ತಾನೆ ಓದು ಮುಗಿಸಿದ್ದು, ತಂದೆ ತಾಯಿಯ ಸಾವಿನಿಂದ ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

      ಸ್ಥಳಕ್ಕೆ ದಂಡಿನಶಿವರ ಸಬ್-ಇನ್ಸ್‍ಪೆಕ್ಟರ್ ಶಿವಲಿಂಗಯ್ಯ ಅವರು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ದಂಡಿನಶಿವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap