15000ಕ್ಕಿಂತ ಒಳಗಿನ ವೇತನದಾರರಿಗೆ ಪೂರ್ತಿ ವೇತನ ಪಾವತಿಸಿ :ಎಫ್ ಕೆ ಸಿ ಸಿ ಐ

ಬೆಂಗಳೂರು

     ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ ಐ) ಸೂಚನೆ ನೀಡಿದೆ

     ರಾಜ್ಯದಲ್ಲಿ 6.5 ಲಕ್ಷ ಕೈಗಾರಿಕೆಗಳಿದ್ದು 65 ಲಕ್ಷ ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 6500 ಕೋಟಿ ರೂಪಾಯಿ ವೇತನ ಪಾವತಿ ಮಾಡಲಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದೆ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ತಿ ವೇತನ ಪಾವತಿ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಬಹಳಷ್ಟು ಮಂದಿ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಲಾಗಿದೆ ಎಂದು ಎಫ್ ಕೆ ಸಿ ಸಿ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದರು.

     ಬಹುತೇಕ ಉದ್ಯಮಿಗಳ ಜೊತೆ ಚರ್ಚಿಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗಿದೆ. 15 ಸಾವಿರ ರೂಪಾಯಿಗಿಂತ ಒಳಗೆ ವೇತನ ತೆಗೆದುಕೊಳ್ಳುತ್ತಿರುವವರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿ ಮಾಡಬೇಕು. ಈ ವೇತನದ ಪ್ಯಾಕೇಜ್ ನಲ್ಲಿ ಇರುವವರು ಜೀವನ ನಡೆಸುವವರು ಸಾಕಷ್ಟು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುತ್ತಾರೆ. ಅವರಿಗೆ ವೇತನ ಕಡಿತ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.

      15 ರಿಂದ 50 ಸಾವಿರ ವೇತನ ಪಡೆಯುವ ವರ್ಗದವರು ಮನೆಯಿಂದ ಕೆಲಸ ಮಾಡಿದ್ದರೆ ಯಾವುದೇ ಕಡಿತ ಇಲ್ಲದೆ ಪೂರ್ತಿ ವೇತನ ಪಾವತಿ ಮಾಡಬೇಕು. ಒಂದು ವೇಳೆ ಲಾಕ್ ಡೌನ್ ವೇಳೆ ಯಾವುದೇ ಕೆಲಸ ಮಾಡದೆ ರಜೆ ಹಾಕಿ ಮನೆಯಲ್ಲಿದ್ದರೆ ಅವರಿಗೆ ವೇತನದಲ್ಲಿ ಶೇ.50ರಷ್ಟನ್ನು ಪಾವತಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.50 ಸಾವಿರಕ್ಕಿಂತ ಮೇಲ್ಪಟ್ಟು ವೇತನ ಪಡೆಯುವವರು ಮನೆಯಿಂದಲೇ ಕೆಲಸ ಮಾಡಿದ್ದರೆ ವೇತನ ಪಾವತಿ ಮಾಡಬೇಕು. ಯಾವುದೇ ಕೆಲಸ ಮಾಡದೆ ರಜೆ ಹಾಕಿ ಮನೆಯಲ್ಲಿದ್ದರೆ ವೇತನ ಪಾವತಿ ಮಾಡುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link