ಹಾವೇರಿ :
ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಇಲ್ಲಿನ ಪುರದಓಣಿಯ ಕೆಲವು ಬಡಕುಟುಂಬಗಳಿಗೆ ಇಲ್ಲಿನ ಮರಿಯಮ್ಮ ದೇವಿ ದೇವಸ್ಥಾನದ ಬಳಿ ಏ.15ರಂದು ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ತರುಣ ಸಂಘದ ವತಿಯಿಂದ 3 ಕ್ವಿಂಟಾಲ್ಅಕ್ಕಿಯನ್ನು ವಿತರಿಸಲಾಯಿತು.
ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ನಿವೃತ್ತ ಮುಖ್ಯೋಪಾಧ್ಯಾಯ ಮಾಲತೇಶ ಕರ್ಜಗಿ, ನಾಗೇಶ ಯಲ್ಲಪ್ಪ ಮಾಳಗಿ, ಲಿಂಗರಾಜ ದಂಡೆಮ್ಮನವರ, ಪ್ರಕಾಶ ಮಾಳಗಿ ವಕೀಲರು, ಮಾಹಾಂತೇಶ ದೇವಿಹೊಸೂರ, ಮಲ್ಲಪ್ಪ ಕಡಕೋಳ, ನೀಲೇಶ ದೇವಸೂರು, ಚಂದ್ರು ಬಿದರಿ, ಹೊನ್ನಪ್ಪ ಮಾಳಗಿ, ಶಿವಾಜಿ ದೇವಿಹೂಸರ, ಮಂಜುನಾಥ ದೊಡ್ಡಮನಿ, ಮಾದೇವಪ್ಪ ಮೆರಣ್ಣನವರ ಮತ್ತಿತರರು ಹಾಜರಿದ್ದರು.