ರೈತ ಸಂಪರ್ಕ ಸೇತು : ಬೆಳೆಗಾರ ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ

 ತುಮಕೂರು :

   ಲಾಕ್ ಡೌನ್ ಪರಿಣಾಮದಿಂದಾಗಿ ಕೃಷಿ ವiತ್ತು ತೋಟಗಾರಿಕಾ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ತರಕಾರಿ,  ತೋಟಗಾರಿಕಾ ಬೆಳೆಗಳು ಹೊಲ-ತೋಟಗಳಲ್ಲಿ ಕಮರಿ ಹೋಗುತ್ತಿವೆ. ರಾಶಿ ರಾಶಿ ಹೊ ಮಣ್ಣು ಪಾಲಾಗಿದೆ.

     ಇದನ್ನು ನೋಡಿ ಬೆಳೆಗಾರ ಅಸಹಾಯಕನಾಗಿದ್ದಾನೆ. ನಾಡಿಗೆ ಅನ್ನ ನೀಡುವ ರೈತ ಹತಾಶನಾಗಲು ಬಿಡಬಾರದು. ರೈತರ ಹಿತದೃಷ್ಟಿಯಿಂದ ಪ್ರಜಾಪ್ರಗತಿ ದಿನಪತ್ರಿಕೆಯು ಬೆಳೆಗಾರ ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕಕಲ್ಪಿಸುವ ಪ್ರಯತ್ನ ಕೈಗೊಂಡಿದೆ. ಈ ಸಂಪರ್ಕ ಸೇತುವೆಯಲ್ಲಿ ರೈತರು ಮಾಡಬೇಕಾದ್ದು ಇಷ್ಟೆ.

ತಾವು ಬೆಳೆದಿರುವ ಬೆಳೆ ವಿವರವನ್ನು ಮಾಹಿತಿ ನೀಡಿದರೆ ಪತ್ರಿಕೆಯಲ್ಲಿ ಪ್ರಕಟಿಸಿಲಾಗುವುದು.  ಖರೀದಿ ಇಚ್ಚೆಯುಳ್ಳವರು ರೈತರನ್ನು ನೆರವಾಗಿ ಸಂಪರ್ಕಸುತ್ತಾರೆ.  ವಿವರವನ್ನು ಕೆಳಕಂಡಂತೆ 9880623083 , 9686680113  ಇಲ್ಲಿಗೆ ವಾಟ್ಸಾಪ್‌ ನಲ್ಲಿ ಕಳುಸುಸಿ.

ಹೆಸರು, ಬೆಳೆದಿರುವ ಬೆಳೆ, ಒಟ್ಟು ಪ್ರಮಾಣ, ಊರು,ವಿಳಾಸ, ಮೊ.ನಂ :ಇಷ್ಟು ಮಾಹಿತಿಯನ್ನು ಕಳುಹಿಸುವುದು ಆಗತ್ಯ.

ಶನಿವಾರದಿಂದ ಮಂಗಳವಾರದವರಿಗೆ ಜಿಲ್ಲಾ ಹಾಗೂ ಹೊರ ಜಲ್ಲೆಗಳಿಂದ ರೈತರು ಕರೆ ಮಾಡುತ್ತದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಖರೀದಿಯ ಪ್ರಯತ್ನಗಳೂ ನಡೆಯುತ್ತಿದ್ದು ಆನೇಕ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರಾಜಕಾರಣಿಗಳು, ದಾನಿಗಳು ರೈತರ ನೆರವಿಗೆ ಬರಬೇಕೆದೆ

 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link