ಶಾಶ್ವತ ಕುಡಿಯುವ ನೀರು ಯೋಜನೆ ಸಫಲತೆಯತ್ತ : ಟಿ.ರಘುಮೂರ್ತಿ.

ಚಳ್ಳಕೆರೆ

    ಕಳೆದ ಹತ್ತಾರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಬರಗಾಲದ ಬವಣೆಯಲ್ಲಿ ನಲುಗುತ್ತಿರುವ ಈ ಕ್ಷೇತ್ರದ ಸರ್ವರಿಗೂ ಕುಡಿಯುವ ನೀರು ದೊರೆಯುವಂತೆ ಮಾಡುವ ಮೂಲಕ ಈ ಭಾಗದ ಎಲ್ಲರೂ ಶಾಶ್ವತವಾಗಿ ಕುಡಿಯುವ ನೀರು ವಂಚಿತರಾಗದಂತೆ ಜಾಗ್ರತೆ ವಹಿಸಲು ವಿವಿ ಸಾಗರದಿಂದ 0.25 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ಒದಗಿಸಬೇಕೆಂದು ಕ್ಷೇತ್ರದ ಜನರಪರವಾಗಿ ಜಲಸಂಪನ್ಮೂಲ ಸಚಿವರಾದ ರಮೇಶ್‍ಜಾರಕಿಹೊಳಿಯವರಲ್ಲಿ ವಿಶೇಷ ಮನವಿ ಮಾಡಿದ್ದು, ಅದಕ್ಕೆ ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

     ಅವರು, ಮಂಗಳವಾರ ಸಂಜೆ ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿವಿ ಸಾಗರದಿಂದ ಚಳ್ಳಕೆರೆ ಕ್ಷೇತ್ರಕ್ಕೆ ಏ.22ರಂದು ನೀರು ಬಿಡುವ ಬಗ್ಗೆ ನಿರ್ಧರಿಸಿದ್ದು, ಏ.23ರಂದು ವಿವಿ ಸಾಗರದಿಂದ ಹಿರಿಯೂರು ಗಡಿಭಾಗದ ಶಿಡ್ಲಯ್ಯನಕೋಟೆಗೆ ನೀರು ಬರಲಿದ್ದು, ನಂತರ ಅದು ವೇದಾವತಿ ನದಿಮೂಲಕ ಚಳ್ಳಕೆರೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದು, ನೀರು ಹರಿಸುವ ಈ ವೈಶಿಷ್ಟ್ಯಮಯ ಯೋಜನೆಯನ್ನು ಜಲಸಂಪನ್ಮೂಲ ಸಚಿವ ರಮೇಶ್‍ಜಾರಕಿಹೊಳಿಯವರು ಉದ್ಘಾಟಿಸಲಿರುವರು.

    ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ನೀರು ಹರಿಸಲು ಬೆಂಬಲ ನೀರಿದ ಸಂಸದ ಎ.ನಾರಾಯಣಸ್ವಾಮಿ, ಜಿಲ್ಲೆಯ ಎಲ್ಲಾ ಶಾಸಕರು, ಪರಮಪೂಜ್ಯ ಸ್ವಾಮೀಜಿಯವರು, ರಾಜಕೀಯ ಮುಖಂಡರು, ರೈತ ಸಂಘದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ ವರ್ಗವದನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಬಹಳ ವರ್ಷಗಳ ಪರಿಶ್ರಮದ ನಂತರ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ವಿವಿ ಸಾಗರದ ನೀರು ಬರಲಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಸರ್ವರಿಗೂ ಕುಡಿಯುವ ನೀರಿನ ಬವಣೆ ನಿವಾರಣೆಯಾಗುತ್ತದೆ ಎಂದರು.

     ವಿವಿ ಸಾಗರದಿಂದ ಒಟ್ಟು 65 ಕಿ.ಮೀ ದೂರ ನೀರು ಹರಿಲಿದ್ದು, ಈ ಸಂದರ್ಭದಲ್ಲಿ ಕಾಲುವೆ ನೀರು ಕುಡಿಯ ಬಿಸಿಲಿನ ಜಳಕ್ಕೆ ಆವಿಯಾಗುವ, ಎಲ್ಲಂದರಲ್ಲಿ ಹರಿಯುವ ಸಂದರ್ಭವಿದ್ದು, ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ 0.25 ಟಿಎಂಸಿ ಪೂರ್ಣಪ್ರಮಾಣದ ನೀರು ಹರಿಯುವಂತೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ಧಾರೆ. ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಪ್ರಭುದೇವ್, ನಾಟಕ ಅಕಾಡೆಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ವೈ.ಪ್ರಕಾಶ್, ಕೆ.ವೀರಭದ್ರಪ್ಪ, ಕೇಶವಪ್ಪ, ಸೈಯದ್ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link