ಬೀಜಿಂಗ್ಕ
ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟಕ್ಕೆ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಮತ್ತಷ್ಟು ಆರ್ಥಿಕ ನೆರವು ಹೆಚ್ಚಿಸಿದ್ದು ಈ ಬೆಳವಣಿಗೆಯೂ ಅಮೇರಿಕ ನೀಡುತ್ತಿದ್ದ ದೇಣಿಗೆ ನಿಂತ ಮೇಲೆ ಎನ್ನುವುದು ಗಮವಾರ್ಹವಾಗಿದೆ.
“ಕೊವಿಡ್-19ರ ವಿರುದ್ಧದ ಜಾಗತಿಕ ಹೋರಾಟವನ್ನು ಬೆಂಬಲಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು 30ಮಿಲಿಯನ್ ಡಾಲರ್ ಹೆಚ್ಚುವರಿ ದೇಣಿಗೆಯನ್ನು ಚೀನಾ ಘೋಷಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ತಿಳಿಸಿದ್ದಾರೆ.
ಇನ್ನು ಚೀನಾದ ಕೊಡುಗೆಯಯು ಡಬ್ಲ್ಯುಎಚ್ಒ ಮೇಲೆ ಚೀನಾ ಸರ್ಕಾರ ಮತ್ತು ಚೀನಾ ಜನತೆಯ ಬೆಂಬಲ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ