ಹಾವೇರಿ:
ನಕಲಿ ಬಿಡಿ ಬೀಜಗಳನ್ನು ದಾಸ್ತಾನು, ಮಾರಾಟ ಮಾಡಲು ಸಿದ್ಧವಾಗಿದ್ದ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸಿದ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು, ಸುಮಾರು ಆರು ಕೋಟಿ ರೂ.ಮೌಲ್ಯದ ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ಜಂಟಿ ತಂಡಗಳ ನೇತೃತ್ವದಲ್ಲಿ ಕಳೆದ ರಾತ್ರಿ ಬ್ಯಾಡಗಿ ಪಟ್ಟಣದ ಸೂರ್ಯ ಕೋಲ್ಡ್ ಸ್ಟೋರೆಜ್ ಮೇಲೆ ದಾಳಿ ನಡೆಸಿದೆ. ಕೃಷಿ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಸಿಪಿಐ ಭಾಗ್ಯವತಿ, ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು , 2,950 ಕ್ವಿಂಟಾಲ್ ನಕಲಿ ಬಿಡಿಬೀಜಗಳನ್ನು ಹಾಗೂ ಛತ್ರ ಗ್ರಾಮದ ವಕ್ರತುಂಡ ಕೋಲ್ಡ್ ಸ್ಟೋರೆಜ್ ನಲ್ಲಿ ಇರಿಸಲಾಗಿದ್ದ ಸುಮಾರು 2,800 ಕ್ವಿಂಟಾಲ್ ನಕಲಿ ಬಿಡಿಬೀಜಗಳನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.