ಹಾವೇರಿ:
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ವಿನಯ ಹುರುಳಿಕುಪ್ಪ ಅವರ ನಿಧನಕ್ಕೆ ಜಿಲ್ಲಾ ಮಾಧ್ಯಮ ಬಳಗದಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು.ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಹಲವು ಪತ್ರಕರ್ತರು ಮಾತನಾಡಿ, ಮೃತ ಪತ್ರಕರ್ತನ ಕುಟುಂಬಕ್ಕೆ ಸರಕಾರದಿಂದ ಆರ್ಥಿಕ ನೇರವು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನಸಿ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಇದೇ ವೇಳೆ ಜಿಲ್ಲಾ ಮಾಧ್ಯಮ ಬಳಗದಿಂದ ಆರ್ಥಿಕ ನೇರವು ನೀಡಲು ತಿರ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ನಿಂಗಪ್ಪ ಚಾವಡಿ, ಮಾಲತೇಶ ಅಂಗೂರ, ವಾಗೀಶ ಪಾಟೀಲ, ಪ್ರಭುಗೌಡ ಪಾಟೀಲ, ರಾಜು ರಿತ್ತಿ, ಫಕ್ಕೀರಯ್ಯ ಗಣಾಚಾರಿ, ಪರಶುರಾಮ ಕೆರಿ, ನಾರಾಯಣ ಹೆಗಡೆ, ಎಚ್.ಕೆ.ನಟರಾಜ, ಶಿವಕುಮಾರ ಹುಬ್ಬಳ್ಳಿ, ನಾಗರಾಜ ಕುರುವತ್ತೆರ, ಸಿದ್ದು ಆರ್.ಜಿ.ಹಳ್ಳಿ, ವಿಜಯಕುಮಾರ ಪಾಟೀಲ, ಸಂಜು ಅರಭಾವಿ, ಕುಮಾರಯ್ಯ ಚಿಕ್ಕಮಠ, ಪರುಶುರಾಮ ಡೂಗನವರ,ಪ್ರಶಾಂತ ಮರೆಮ್ಮನವರ. ನಿಂಗಪ್ಪ ಆರೇರ, ಮಂಜುನಾಥ ಗುಡಿಸಾಗರ, ಬಾಪು ನಂದಿಹಳ್ಳಿ, ರವಿ ಹೂಗಾರ, ರಾಜು ಗಾಳೇಮ್ಮನವರ, ಮೌಲಾ ಜಿಗರಿ, ಪ್ರವೀಣ ಪೂಜಾರ, ಅಲಿಸಾಬ್ ಸೇರಿದಂತೆ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ