ತುಮಕೂರು:
ನಗರದಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ವ್ಯಕ್ತಿಗಳಿಗೆ ಪಾಲಿಕೆ ಸಿಬ್ಬಂಧಿ 100 ರೂ. ದಂಡ ವಿಧಿಸುತ್ತಿದ್ದಾರೆ.
ಹೌದು, ಈ ಹಿಂದೆಯೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಇರುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ಕಂಡುಬಂದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಮಾಸ್ಕ್ ಧರಿಸದೇ ಓಡಾಡುವ ವ್ಯಕ್ತಿಗಳಿಗೆ ದಂಢ ವಿಧಿಸುವಂತೆ ಖುದ್ದು ತುಮಕೂರು ಪಾಲಿಕೆ ಆಯುಕ್ತ ಭೂಬಾಲನ್ ಸೂಚನೆ ನೀಡಿದ್ದಾರೆ. ಆದರೂ ಸಾರ್ವಜನಿಕರು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದರು. ಇಂದು ಪಾಲಿಕೆ ಅಧಿಕಾರಿಗಳು ನಗರದಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವ್ಯಕ್ತಿಗೆ 100 ರೂ. ದಂಡ ವಿಧಿಸಿದ್ದಾರೆ.
ಒಟ್ಟು 81 ಜನರಿಗೆ ದಂಡ ಹಾಕಲಾಗಿದ್ದು, ಇದರ ಜೊತೆಗೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದಕೊಳ್ಳದೇ ಇದ್ದಿದ್ದಕ್ಕೆ ನಾಲ್ಕು ಅಂಗಡಿಗಳಿಗೆ ತಲಾ 500 ರೂ ದಂಡ ಧಿಸಲಾಗಿದೆ. ಈ ಮೂಲಕ ಜನರಲ್ಲಿ ಜಾಗ್ರತೆ ಮೂಡಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
