ನವದೆಹಲಿ
ದೆಹಲಿಯ ಜನತೆಗೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೆಲಸ ಮಾಡುವ ಮಾಧ್ಯಮ ವೃತ್ತಿರಂಗದವರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.“ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 529 ಜನರ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಅದರಲ್ಲಿ ಕೇವಲ ಮೂವರಿಗೆ ಮಾತ್ರ ಪಾಸಿಟೀವ್ ಬಂದಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.“ಈಗ ದೇಶ ಎದುರಿಸುತ್ತಿರುವ ಇಂತಹ ಕ್ಲಿಷ್ಟ ಸಮಯದಲ್ಲಿ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾದದ್ದು. ಪಾಸಿಟೀವ್ ಬಂದ ಮೂವರೂ ಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ .ಕೊರೊನಾ ಸೋಂಕು ಪೀಡಿತರನ್ನು ಮಾಧ್ಯಮವರು ಭೇಟಿಯಾಗುತ್ತಿರುವುದರಿಂದ, ಕಳೆದ ವಾರ ಎಲ್ಲಾ ಮಾಧ್ಯಮದವರ ಕೊರೊನಾ ಟೆಸ್ಟ್ ಮಾಡಿಸಲು ದೆಹಲಿ ಸರಕಾರ ನಿರ್ಧರಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








