ಮಹಾರಾಷ್ಟ್ರದ : ಪ್ಲಾಸ್ಮಾ ಚಿಕಿತ್ಸೆಗೊಳಗಾದ ಮೊದಲ ಕೊರೋನಾ ರೋಗಿ ಸಾವು

ಮುಂಬೈ :

        ಕೊರೋನಾಗೆ ಪ್ಲಾಸ್ಮಾ ಚಿಕಿತ್ಸೆಯ ಮಾರ್ಗವನ್ನು ಕಂಡುಕೊಂಡಿದ್ದರಿಂದ ಭಾರತದಲ್ಲೂ ಆ ಪ್ರಯೋಗ ಮಾಡಲಾಗಿತ್ತು. ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯೂ ಆಗಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಫ್ಲಾಸ್ಮಾ ಚಿಕಿತ್ಸೆಗೊಳಗಾಗಿದ್ದ ಮೊದಲ ರೋಗಿ ಸಾವನ್ನಪ್ಪಿದ್ದಾನೆ. 

    ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆ ಇರುವುದರಿಂದ ಅಲ್ಲಿ ಕೂಡ ಪ್ರಯೋಗಾತ್ಮಕವಾಗಿ ಕೊರೋನಾ ಸೋಂಕಿತನಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 53 ವರ್ಷದ ಆ ರೋಗಿ ಸಾವನ್ನಪ್ಪಿದ್ದಾರೆ.

   ಈ ಬಗ್ಗೆ ಮುಂಬೈನ ಲೀಲಾವತಿ ಆಸ್ಪತ್ರೆ ಸಿಇಓ ಡಾ. ರವಿಶಂಕರ್ ಖಚಿತಪಡಿಸಿದ್ದಾರೆ. ಕೊರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ಈ ರೋಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದರು. ಆಗ ಕೊರೋನಾ ಸೋಂಕು ಖಚಿತವಾದ್ದರಿಂದ ಏಪ್ರಿಲ್ 20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಏ. 25ರಂದು ಪ್ಲಾಸ್ಮಾ ಪ್ರಯೋಗವನ್ನು ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ನಡೆದ ಮೊದಲ ಪ್ಲಾಸ್ಮಾ ಚಿಕಿತ್ಸೆ ಇದಾಗಿತ್ತು. ಬುಧವಾರ ರಾತ್ರಿ  ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link