ಮಧುಗಿರಿ
ಮಧ್ಯ ರಾತ್ರಿ ರೈತರೊಬ್ಬರಿಗೆ ಸೇರಿದ ರೇಷ್ಮೆ ಶೆಡ್‍ನೊಳಗೆ ಸಿಮೆಂಟ್ ಲಾರಿಯೊಂದು ನುಗ್ಗಿ ರೇಷ್ಮೆ ಶೆಡ್, ಹುಳ, ಸಲಕರಣೆ ಮತ್ತು ದ್ವಿಚಕ್ರ ವಾಹನ ಹಾನಿಯಾಗಿದ್ದು, ರೇಷ್ಮೆ ಬೆಳೆಗಾರನಿಗೆ ಗಾಯಗಳಾಗಿರುವ ಘಟನೆ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯ ರಾತ್ರಿ ನಡೆದಿದೆ.
ಕೊಡಿಗೇನಹಳ್ಳಿ ಹೋಬಳಿ ಚಿಕ್ಕಮಾಲೂರು ಗ್ರಾಮದ ಹೊರವಲಯದ ಸಮೀಪದಲ್ಲಿರುವ ರೇಷ್ಮೆ ಶೆಡ್ ನಲ್ಲಿ ರೈತ ಶಿವಣ್ಣ ಮತ್ತು ಪತ್ನಿ ರಾತ್ರಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಮಧುಗಿರಿ ಕಡೆಯಿಂದ ಬಂದ ಸಿಮೆಂಟ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಏಕಾಏಕಿ ಶೆಡ್‍ನೊಳಗೆ ನುಗ್ಗಿದ್ದು, ರೇಷ್ಮೆಯ ಶೆಡ್, ಹುಳ, ಸಲಕರಣೆಗಳು ಸೇರಿದಂತೆ ದ್ವಿಚಕ್ರ ವಾಹನ ಸಹ ಹಾಳಾಗಿವೆ. ರೈತ ಶಿವಣ್ಣನಿಗೆ ಗೋಡೆ ಬಿದ್ದು ತಲೆ ಮತ್ತು ಕೈ-ಕಾಲುಗಳಿಗೆ ಗಾಯಗಾಳಾಗಿವೆ. ಶೆಡ್ ಸಮೀಪವಿದ್ದ ಎರಡು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿವೆ.
ಮಧುಗಿರಿ ವಿಭಾಗದ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ನಾಗರಾಜು, ವೃತ್ತ ನಿರೀಕ್ಷಕ ಸರ್ದಾರ್, ಪಿ.ಎಸ್.ಐ. ಫಾಲಾಕ್ಷಪ್ರಭು, ಬೆಸ್ಕಾಂ ಎಂಜಿನಿಯರ್ ಲಕ್ಷ್ಮೀಪತಿ ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ