ಕನ್ನಡನಾಡು ಕಲೆ, ಸಾಹಿತ್ಯ, ಸಂಸೃತಿಗಳ ತವರೂರಾಗಿದೆ : ಗೋಪಿರಂಗನಾಥನ್

ತುರುವೇಕೆರೆ:

      ಕನ್ನಡನಾಡು ಕಲೆ, ಸಾಹಿತ್ಯ, ಸಂಸೃತಿಗಳ ತವರೂರಾಗಿದೆ ಎಂದು ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆ ಆಡಳಿತ ನಿರ್ಧೇಶಕ ಗೋಪಿರಂಗನಾಥನ್ ಅಭಿಪ್ರಾಯಪಟ್ಟರು.

       ತಾಲೂಕಿನ ಅಮ್ಮಸಂದ್ರ ಬಿರ್ಲಾ ಆಡಿಟೋರಿಯಂನಲ್ಲಿ ಸಿಮೆಂಟ್ ಕಾರ್ಖಾನೆ ನೌಕರರ ಸಂಘದ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ದೇಶದ ಹಲವಾರು ರಾಜ್ಯಗಳನ್ನು ನೋಡಿದ್ದೇನೆ. ಕನ್ನಡ ನಾಡಿನ ಜನರು ಕನ್ನಡ ಭಾಷೆ, ಸಂಸೃತಿಯನ್ನು ಹೆಚ್ಚು ಪ್ರೀತಿಸುವುದರ ಜೊತೆಗೆ ಸಂಸೃತಿಯನ್ನು ಎಲ್ಲಡೆ ಪರಿಚಯಿಸಲಿದ್ದಾರೆ. ನಮ್ಮ ಕಾರ್ಖಾನೆಯ ನೌಕರರು ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರುವುದು ತುಂಬ ಶ್ಲಾಘನೀಯ ಎಂದರು.

        ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಮಾತನಾಡಿ ಕನ್ನಡ ಬಾಷೆಯನ್ನು ಉಳಿಸಿ-ಬೆಳೆಸಲು ನಾವೆಲ್ಲಾ ಪಣ ತೊಡಬೇಕಿದೆ. ಬೇರೆ ಭಾಷೆಗೆ ಹೋಲಿಸಿದರೆ ಕನ್ನಡಕ್ಕೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಬಂದಿದ್ದು ಕನ್ನಡಿಗರ ಹೆಮ್ಮೆಯಾಗಿದೆ. ಇಂದು ಕರ್ನಾಟಕದಲ್ಲಿ ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಮಾತನಾಡುವರ ಸಂಖ್ಯೆ ಶೇ 60ಕ್ಕೆ ಇಳಿದಿದ್ದು ವಿಷಾದಕರವಾಗಿದೆ. ಆ ನಿಟ್ಟಿನಲ್ಲಿ ಕನ್ನಡಾಭಿಮಾನಿಗಳು ಬೇರೆ ಬಾಷೆಯವರ ಜೊತೆ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡದ ಕಿಚ್ಚನ್ನು ದೇಶಾದ್ಯಂತ ಹಬ್ಬಿಸಿ ಎಂದು ಕರೆ ನೀಡಿದರು.

         ಈ ಸಂದರ್ಬದಲ್ಲಿ ಕಾರ್ಖಾನೆ ಮಹಿಳಾ ಸಿಬ್ಬಂದಿ ಕನ್ನಡ ಹಾಡುಗಳಿಗೆ ಅನುಗುಣವಾಗಿ ಹೆಜ್ಜೆಹಾಕಿದರೆ, ಪುರುಷ ನೌಕರರು ಕನ್ನಡ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ದೊಡ್ಡೇನಹಳ್ಳಿ ಸೆಂಟ್ ಮೆರೀಸ್ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಸಂಸೃತಿ ಬಿಂಬಿಸುವಂತಹ ಜಾನಪದ ಕಲೆಗಳಾದ ಸೋಮನಕುಣಿತ, ನಂದಿದ್ವಜ ಕುಣಿತ, ವೀರೆಗಾಸೆ ಕುಣಿತ, ಧ್ವಜಕುಣಿತ, ಹರೇವಾದ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರು ನಿಬ್ಬೆರಗಾಗುವಂತೆ ಮಾಡಿದರು. ರಾಜ್ಯೋತ್ಸವದ ಅಂಗವಾಗಿ ನೌಕರ ವರ್ಗದ ಕುಟುಂಬದವರು ಚಚಾಸ್ಪರ್ಧೆ, ಸಂಗೀತ, ಪ್ರಬಂಧ ಸ್ಪರ್ಧೆಗಳಲ್ಲಿ ಪಾಲ್ಗೋಂಡು ವಿಜೇತರಾದವರಿಗೆ ಹಾಗು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

      ಕಾರ್ಯಕ್ರಮದಲ್ಲಿ ಕಾರ್ಖಾನೆ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಡಿ.ಪಣಿಕುಮಾರ್, ಸುರಕ್ಷತಾ ಇಲಾಖಾ ಮುಖ್ಯಸ್ಥ ಜನಕರಾಜು ಕಾರ್ಮಿಕರ ಸಂಘದ ಕಾರ್ಯದರ್ಶಿ ಟಿ.ಜಿ.ಉದಯಕುಮಾರ್, ಮುಖ್ಯ ಸಂಚಾಲರಾದ ಓಂಕಾರಪ್ಪ, ಡಿ.ವಿ.ಕುಮಾರ್ ಸ್ವಾಮಿ, ಹೆಚ್.ಕೆ.ರವಿ, ವೇದಮೂರ್ತಿ, ದಿಗ್ವಿಜಯ ಶಾಲೆಯ ಮಂಜಣ್ಣ, ಮುಖಂಡರಾದ ಸುಂದರ್ ಸೇರಿದಂತೆ ಇತರರು ಪಾಲ್ಗೋಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link