ವಾಹನ ತಪಾಸಣೆ ಮಾಡ್ತಿದ್ದ ASP ಗೆ ಗುದ್ದಿದ ಬೈಕ್​ ಸವಾರ!!

ವಿಜಯಪುರ :

      ಕರ್ತವ್ಯದ ಮೇಲಿದ್ದ ಎಎಸ್ಪಿ ಡಾ. ರಾಮ ಅರಸಿದ್ಧಿ ರವರಿಗೆ ಬೈಕ್ ಒಂದು ಡಿಕ್ಕಿ ಹೊಡೆದು ಎಎಸ್ಪಿ ರವರು ತೀವ್ರ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

     ಲಾಕ್ ಡೌನ್ ಸಡಿಲಿಕೆ ಮಾಡಿದ ದಿನವಾದ ಇಂದು ವಿಜಯಪುರ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಎಸ್ಪಿ ರಾಮ ಅರಸಿದ್ದಿ ಕಾಮತ್ ಹೊಟೇಲ್ ಬಳಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿದ್ದರು. ಈ ವೇಳೆ ಅವರಿಗೆ ವೇಗವಾಗಿ ಬಂದ ಬೈಕ್ ಸವಾರ ಯುವಕನೋರ್ವ  ಬೈಕ್ ಸವಾರ ವಾಹನ ತಪಾಸಣೆ ಮಾಡುತ್ತಿದ್ದ ಎಎಸ್ಪಿ ರವರಿಗೆ ಡಿಕ್ಕಿ  ಹೊಡೆದಿದ್ದಾನೆ.

      ಘಟನೆಯಲ್ಲಿ ಎಎಸ್ಪಿ ಅರಸಿದ್ಧಿ ಅವರಿಗೆ ಮುಖ ಹಾಗೂ ತಲೆಗೆ ತೀರ್ವ ಗಾಯಗಳಾಗಿವೆ. ಕೂಡಲೇ ಗಾಯಾಳು ಪೊಲೀಸ್ ಅಧಿಕಾರಿಯನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

      ವಿಷಯ ತಿಳಿಯುತ್ತಲೇ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link