ತುರುವೇಕೆರೆ :
ಆಕಸ್ಮಿಕ ಬೆಂಕಿ ತಗುಲಿ ಎರಡು ಹುಲ್ಲಿನ ಮೆದೆಗಳು ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಸಂಗಲಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹುಲ್ಲಿನ ಬಣವೆಗಳು ಸಂಗಲಾಪುರ ಗ್ರಾಮದ ಮಹಾಲಿಂಗಪ್ಪ ಹಾಗೂ ರುದ್ರೇಶ್ ಎಂಬುವರಿಗೆ ಸೇರಿದ್ದು, ಸೋಮವಾರ ರಾತ್ರಿ ಮೊದಲು ಒಂದು ಬಣವೆಗೆ ಬೆಂಕಿ ತಗುಲಿ, ನಂತರ ಮತ್ತೊಂದು ಬಣವೆಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ.
ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರೂ, ಬೆಂಕಿಯ ಪ್ರಖರತೆ ಹೆಚ್ಚಾಗಿದೆ. ನಂತರ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ