ಹಾವೇರಿ:
ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರಕಾರ ಕಟ್ಟು ನಿಟ್ಟಿನ ಲಾಕ್ಡೌನ ಜಾರಿಆದಾಗಿನಿಂದ ರಪ್ತು ಸಾಗಾಟ ಸ್ಥಗಿತವಾಗಿದ್ದರಿಂದ ರೈತರ ಹಸಿ ಮೆಣಸಿನಕಾಯಿ ಸೇರಿದಂತೆ ಇತರ ಎಲ್ಲಾ ತರಕಾರಿ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದರಿಂದ ವಿಧಿ ಇಲ್ಲದೇಖರ್ಚು ಮಾಡಿದ ಹಣವೂ ವಾಪಸ್ ಬರದೇ ಹೋದಕಾರಣ ತಾಲೂಕಿನ ಕನಕಾಪುರ ಗ್ರಾಮದ ಪಕ್ಕೀರಗೌಡ ಗಾಜೀಗೌಡ್ರ ಹಾಗೂ ಮಲ್ಲೇಶ ತಳವಾರ ಈ ಇಬ್ಬರುರೈತರು ನಾಲ್ಕು ಎಕರೆ ಹಸಿಮೆಣಸಿನ ಗಿಡಗಳನ್ನು ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದ್ದಾರೆ.
ಬೇಸಿಗೆ ನೀರಾವರಿ ಬೆಳೆಯಲ್ಲಿ ಉತ್ತಮ ಫಸಲನ್ನು ಬೆಳದಿದ್ದ ಈ ರೈತರು ಸಾಕಷ್ಟು ಕಷ್ಟ ಪಟ್ಟು ಹಸಿಮೆಣಸಿನಕಾಯಿ ಗಿಡಗಳನ್ನು ಬೆಳಸಿದ್ದರು. ಹಸಿ ಮೆಣಸಿನಕಾಯಿ ಕ್ಷಿಂಟಾಲ್ಗೆ 700 ರಿಂದ 1000 ಬೆಳೆಗೆ ಕೇಳುವವರಿಲ್ಲದಂತಾಗಿದೆ. ಹಸಿಮೆಣಸಿನಕಾಯಿ ಕಟಾವುಗೊಳಿಸಿ ಮಾರುಕಟ್ಟೆಗೆ ತರಲು 700 ರೂಪಾಯಿ ಖರ್ಚು ರೈತನಿಗೆ ತಗಲುತ್ತದೆ. ಇದರಿಂದ ಬೇಸತ್ತರೈತರು ಹೊಲದಲ್ಲಿ ಫಲ ಕೋಡುತ್ತಿದ್ದ ಹಸಿಮೆಣಸಿನ ಗಿಡಗಳನ್ನು ನಾಶ ಪಡಿಸಿ ಮುಂಗಾರು ಬಿತ್ತನೆಗೆ ಭೂಮಿ ಸಜ್ಜುಗೊಳಿಸಿತ್ತಿದ್ದಾರೆ.ಉತ್ತಮ ಫಸಲು ಬಂದರೂ ಬೆಲೆ ಸಿಗದೇ ರೈತರು ದಿಕ್ಕು ಕಾಣದಂತಾಗಿದ್ದಾರೆ.
ಜಿಲ್ಲಾಡಳಿತ,ಜಿಲ್ಲಾ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಗಳು ಇಲ್ಲಿಯ ವರೆಗೂರೈತರ ಹಸಿ ಮೆಣಸಿನ ಕಾಯಿ, ತರಕಾರಿಗಳಿಗೆ ಬೆಲೆ ದೊರಕಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಷ್ಟದಲ್ಲಿರುವರೈತರು ಬೆಳೆ ಬಂದರೂ ಬೆಲೆ ಸಿಗದೇ ಕಾರಣತೀರಾ ನೋವನ್ನುಂಟು ಎಂದು ತಮ್ಮ ಅಳಲನ್ನು ತೊಡಿಕೊಂಡರು.ಇಂತಹ ಸಂಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಕಾಲಕ್ಕೆ ಸರಿಯಾದ ಕ್ರಮ ಜರುಗಿಸದೇ ಇರುವುದಕ್ಕೆ ನಮ್ಮ ಬೆಳೆಗಳಿಗೆ ಬೆಲೆ ಸಿಗದಂತಾಯಿತು ಎಂದುರೈತರುಆರೋಪ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ