ಮಿಡತೆ ಹಾವಳಿ ತಡೆಗೆ ಪಾಕಿಸ್ತಾನ ಮತ್ತು ಇರಾನ್ ನೆರವು ಕೇಳಿದ ಭಾರತ..!

ನವದೆಹಲಿ:

      ಮರುಭೂಮಿಗಳಲ್ಲಿ  ಮಿಡತೆಗಳು ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟು ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ .ಇದರ ತಡೆಗೆ ಸಂಘಟಿತ ಸಹಕಾರ ತೋರಿಸುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ಗೆ ಪ್ರಸ್ತಾವನೆ ಸಲ್ಲಿಸಿದೆ.

ವಿನಾಶಕಾರಿ ವಲಸೆ ಕೀಟಗಳು ಆಫ್ರಿಕಾ ಸೇರಿದಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಆಹಾರ ಭದ್ರತೆಗೆ ಗಂಭೀರ ಅಪಾಯವನ್ನುಂಟು ಮಾಡಿದೆ. ಇದರ ತಡೆಗಟ್ಟುವಿಕೆಗೆ ಸಮನ್ವಯದ ಸಹಕಾರ, ಪ್ರತಿಕ್ರಿಯೆ ನೀಡುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ನ್ನು ಕೇಳಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತದ ಪ್ರಸ್ತಾವನೆಗೆ ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಪಾಕಿಸ್ತಾನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತ ತನ್ನ ಸಿಸ್ತಾನ್-ಬಲೂಚಿಸ್ತಾನ್ ಮತ್ತು ದಕ್ಷಿಣ ಖೋರಾಸಾನ್ ಪ್ರಾಂತ್ಯಗಳಲ್ಲಿ ಮರುಭೂಮಿ ಮಿಡತೆಗಳ ಹರಡುವಿಕೆಯನ್ನು ತಡೆಗಟ್ಟಲು ಇರಾನ್‌ಗೆ ಕೀಟನಾಶಕವನ್ನು ಪೂರೈಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಲೂಚಿಸ್ತಾನದ ಸಂತಾನೋತ್ಪತ್ತಿ ಪ್ರದೇಶಗಳಿಂದ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಮರುಭೂಮಿ ಮಿಡತೆಗಳ ಗುಂಪುಗಳು ಭಾರತಕ್ಕೆ ವಲಸೆ ಹೋಗುತ್ತಿವೆ.ಭಾರತದಲ್ಲಿ, ಕಳೆದ ವಾರಗಳಲ್ಲಿ ಹೆಚ್ಚು ಮಿಡತೆಯ ಗುಂಪುಗಳು ಮತ್ತು ಸಣ್ಣ ಹಿಂಡುಗಳು ಪಾಕಿಸ್ತಾನದಿಂದ ರಾಜಸ್ಥಾನದ ಜೋಧಪುರವನ್ನು ತಲುಪಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link