ಲಾಕ್‍ಡೌನ್‍ನಲ್ಲೂ ಕೃಷಿ ಯಂತ್ರಧಾರೆಯಿಂದ ರೈತರಿಗೆ ನೆರವು

ಹುಳಿಯಾರು

     ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ರೂಪಿಸಲ್ಪಟ್ಟ ಕೃಷಿ ಯಂತ್ರಧಾರೆ ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಗೆ ನೆರವಿಗೆ ಬಂದಿರುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಯೋಜನಾಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ.

     ಹಂದನಕೆರೆ ಹೋಬಳಿಯ ಅಂಕಸಂದ್ರ ಗ್ರಾಮದಲ್ಲಿ ಕೃಷಿ ಯಂತ್ರಧಾರೆಯ ಮೇವು ಕತ್ತರಿಸುವ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಕಳೆದ ಐದು ವರ್ಷಗಳಿಂದಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಲ್ಲಿ ಕೃಷಿ ಯಂತ್ರಧಾರೆಯು ನಿರಂತರವಾಗಿ ಸೇವೆ ನೀಡುತ್ತಾ ಬಂದಿದ್ದು, ಇದುವರೆಗೂ ಮೂರು ಸಾವಿರಕ್ಕೂ ಅಧಿಕ ರೈತರು ಕೃಷಿಯಲ್ಲಿನ ಯಂತ್ರೋಪಕರಣಗಳ ಉಪಯೋಗ ಮಾಡಿಕೊಂಡಿ ರುತ್ತಾರೆ. ಇದರಿಂದಾಗಿ ನಮ್ಮ ಕೇಂದ್ರದಲ್ಲಿ ಸ್ಥಳೀಯವಾಗಿ ಇರುವ ದರಕ್ಕಿಂತಲೂ ಶೇಕಡ 20 ರಷ್ಟು ಕಡಿಮೆ ದರದಲ್ಲಿ ರೈತರಿಗೆ ಯಂತ್ರೋಪಕರಣಗಳನ್ನು ನೀಡುತ್ತಿರುವುದರಿಂದ ಸಾಕಷ್ಟು ಹಣ ರೈತರಿಗೆ ಉಳಿತಾಯವಾಗಲಿದೆ ಎಂದರು.

    ಲಾಕ್ಡೌನ್ ಸಮಯದ ಎರಡು ತಿಂಗಳಲ್ಲಿ ಸಾಕಷ್ಟು ಜನರು ಕೃಷಿಯಂತ್ರಧಾರೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಹಂದನಕೆರೆ ಹೋಬಳಿಯಲ್ಲಿ ರೈತರು ಭೂಮಿ ಸಿದ್ಧತೆ ಉಪಕರಣಗಳಾದ ಟ್ರ್ಯಾಕ್ಟರ್ ನೇಗಿಲು, ಕಲ್ಟಿವೇಟರ್, ಬಿತ್ತನೆ ಕೂರಿಗೆ, ಗರಿ ಕತ್ತರಿಸುವ ಯಂತ್ರ ಹಾಗೂ ಸಸಿಗಳಿಗೆ ಗುಂಡಿ ತೆಗೆಯುವ ಯಂತ್ರ ಮುಂತಾದ ಉಪಕರಣಗಳ ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಲಾಕ್‍ಡೌನ್‍ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಕೃಷಿ ಯಂತ್ರಧಾರೆ ಕೆಲಸ ನಿರ್ವಹಿಸುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ ಎಂದಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ದಿನೇಶ್ ಪೂಜಾರಿ, ಸಿ.ಎಚ್.ಎಸ್.ಸಿ ಪ್ರಬಂಧಕರಾದ ಚೇತನ್ ಕುಮಾರ್, ಚಾಲಕರಾದ ಚನ್ನಯ್ಯ ಹಾಗು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link