ಸರ್ಕಾರಿ ಬಸ್ ನಿಲ್ದಾಣಕ್ಕೆ ಕವಿತಾ.ಎಸ್ ಮನ್ನೀಕೆರೆ ಅನಿರೀಕ್ಷಿತ ಭೇಟಿ

ಚಿತ್ರದುರ್ಗ:

    ಕೊರೊನಾ ಹರಡದಂತೆ ತಡೆಯಲು ಸಾಮಾಜಿಕ ಅಂತರ ಅತಿ ಮುಖ್ಯವಾಗಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ ಮಹಾಮಾರಿ ತೊಲಗಿಸಲು ಕೈಜೋಡಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಪರಿಸರ ನಿರ್ದೇಶಕಿ ಕವಿತಾ.ಎಸ್ ಮನ್ನೀಕೆರೆ ತಿಳಿಸಿದರು.

    ನಗರದ ಸರ್ಕಾರಿ ಬಸ್ ನಿಲ್ದಾಣಕ್ಕೆ ಅನಿರೀಕ್ಷಿತ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಲಾಕ್‍ಡೌನ್ ಸಡಿಲಿಸಿದ ನಂತರ ಇತ್ತೀಚೆಗೆ ಆರಂಭವಾದ ಬಸ್ ಸಂಚಾರಿ ವ್ಯವಸ್ಥೆ ಕಲ್ಪಿಸಿದ ನಂತರ ಸಿಬ್ಬಂದಿ ವರ್ಗ ಜಾಗೃತಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಪ್ರಯಾಣಿಕರಿಗೆ ಲಾಕ್‍ಡೌನ್ ಪಾಲನೆಯ ಮೂಲಕ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿ, ಎಲ್ಲಾ ಪ್ರಯಾಣಿಕರ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ವರ್ಗದವರ ಹಾಜರಾತಿ ಖಡ್ಡಾಯ ಇರದಿದ್ದರೂ ಸಹಿತ ಹಾಜರಾಗದ ಸಿಬ್ಬಂದಿಗೆ ಸಂಬಳ ನೀಡಲು ನಿಗಮ ಬದ್ಧವಾಗಿದೆ. ಚಿತ್ರದುರ್ಗ ವಿಭಾಗದ ಎಲ್ಲಾ ಘಟಕಗಳಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಕಾರ್ಯದಲ್ಲಿ ತೊಡಗಿದ್ದು, ಚಿತ್ರದುರ್ಗ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲಿ ಮುಂದಿನ ದಿನಗಳಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ತಿಳಿಸಿದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸಗಾರರು ಕೆಲಸಕ್ಕೆ ಬಾರದ ಕಾರಣ ವರ್ಕ್‍ಶಾಪ್ ಕಾಮಗಾರಿ ವಿಳಂಬವಾಗಿದ್ದು, ಲಾಕ್‍ಡೌನ್ ಮುಗಿದ ನಂತರ ಕಾಮಗಾರಿಯ್ನು ಪ್ರಾರಂಭಿಸಲಾಗುವುದೆಂದು ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡಿದಾಗ, ತುರ್ತಾಗಿ ಕಾಮಗಾರಿ ಆರಂಭಿಸಲು ಭರವಸೆ ನೀಡಿದ್ದರು ಲಾಕ್‍ಡೌನ್ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಮತ್ತು ಎಲ್ಲಾ ಘಟಕಗಳಲ್ಲಿ ಮೂಲಭೂತಸೌಕರ್ಯ ಒದಗಿಸಿ, ಹಸಿರೀಕರಣಗೊಳಿಸಲು ಆದ್ಯತೆ ನೀಡಲಾಗುವುದೆಂದು ತಿಳಿಸಿದರು.

     ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ಶಿವಕುಮಾರಯ್ಯ ಮಾತನಾಡುತ್ತಾ, ಎಲ್ಲಾ ಕಾಮಗಾರಿಗಳನ್ನು ಅವಧಿಯಂತೆ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.ಕಾರ್ಯಪಾಲಕ ಅಭಿಯಂತರರಾ ಕೃಷ್ಣಪ್ಪ ಮಾತನಾಡಿ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಮಹಾಮಾರಿ ಹೋಗಲಾಡಿಸಲು ಸಹಕರಿಸಬೇಕೆಂದು ಪ್ರಯಾಣಿಕರಲ್ಲಿ ಮನವಿ ಮಾಡಿದರು.

     ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಮಾತನಾಡಿ, ಚಿತ್ರದುರ್ಗ ಘಟಕದ ನಾಲ್ಕು ಎಕರೆ ಜಾಗದಲ್ಲಿ ಎರಡು ಎಕರೆ ಜಾಗ ಒತ್ತುವರಿಯಾಗಿದ್ದು, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರತ್ರಕರ್ತರು ಪ್ರಶ್ನಿಸಿದಾಗ, ಈಗಗಲೇ ಈ ವಿಷಯವನ್ನು ತಹಶೀಲ್ದಾರ್‍ರವರ ಗಮನಕ್ಕೆ ತಂದಿದ್ದು, ಮುಂದಿನ ಕ್ರಮಕ್ಕೆ ತಿಳಿಸಲಾಗಿದೆ. ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಈಗಗಲೇ ಸಮರ್ಪಕವಾಗಿ ನಿರ್ವಹಿಸಿದ್ದು, ಪ್ರಯಾಣಿಕರು ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap