ಚಾಮರಾಜನಗರ : ವನ್ಯಧಾಮದಲ್ಲಿ ಒಂಟಿಸಲಗ ಸಾವು!!

ಚಾಮರಾಜನಗರ:

      45-50 ವರ್ಷದ  ಒಂಟಿಸಲಗವೊಂದು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ವನ್ಯಧಾಮದಲ್ಲಿ ನಡೆದಿದೆ.

     ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ನೇರಳೆ ಮರದ ಗುಂಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಆನೆಯ ಕಳೇಬರ ನೋಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

    3 ದಿನಗಳ ಹಿಂದಷ್ಟೇ ಕೌದಳ್ಳಿ ವನ್ಯಜೀವಿ ವಲಯದ ದಂಟೂರು ಕರೇಕನಹಟ್ಟಿ ಹಗ್ಗು ನಾಲಾದಲ್ಲಿ ಒಂದು ಆನೆಯ ಕಳೇಬರ ಪತ್ತೆಯಾಗಿತ್ತು, ಅಲ್ಲದೆ ಕಳೆದ ಮಾರ್ಚ್ ನಲ್ಲಿ 7 ರಿಂದ 8 ಆನೆ ಮೃತಪಟ್ಟ ಪ್ರಕರಣಗಳು ದಾಖಲಾಗಿದ್ದವು.

    ಚಾಮರಾಜನಗರದಲ್ಲಿ ಮತ್ತೆ ಆನೆ ಸಾವಿನ ಪ್ರಕರಣಗಳು ಮರುಕಳಿಸಿದ್ದು, ಕಳೆದ 3 ದಿನದಲ್ಲಿ ಎರಡು ಆನೆಗಳ ಕಳೇಬರ ಪತ್ತೆಯಾಗಿದ್ದಾವೆ. ಆನೆಗಳ ಸಾವಿನಿಂದ ವನ್ಯ ಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ.  

       ಪದೇ ಪದೇ ಆನೆಗಲು ಸಾವಿಗೀಡಾಗುತ್ತಿದ್ದು, ಇದರ ನಿಖರ ಕಾರಣ ತಿಳಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಆನೆ ಸಾವಿಗೆ ನಿಜ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link