ಲಂಡನ್:
ಜಗತ್ತಿನೆಲ್ಲಡೆ ಕೊರೋನಾ ತನ್ನ ವಿಲಯ ನರ್ತನ ಮುಂದುವರೆಸಿದ್ದು, ಈ ವರೆಗೂ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ 3.8 ಲಕ್ಷ ಜನರು ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ವಿಶ್ವದೆಲ್ಲೆಡೆ ಒಟ್ಟಾರೆಯಾಗಿ 58,60,213 ಮಂದಿ ಸೋಂಕಿಗೊಳಗಾಗಿದ್ದು, 25,40,993ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಮಹಾಮಾರಿ ವೈರಸ್’ಗೆ 3,60,049 ಮಂದಿ ಬಲಿಯಾಗಿದ್ದಾರೆ.
ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿಯೇ ಹೆಚ್ಚು ಸೋಂಕಿತರಿದ್ದು, ಒಟ್ಟು 17,21,753 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬ್ರೆಜಿಲ್ 438,812, ರಷ್ಯಾ 379,051, ಸ್ಪೇನ್ 284,986, ಬ್ರಿಟನ್ 269,127, ಇಟಲಿ 231,732, ಫ್ರಾನ್ಸ್ 186,238, ಜರ್ಮನಿ 182,452 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








