ಬೆಂಗಳೂರು
ಪೊಲೀಸ್ ಇಲಾಖೆಯ ಹಳೆಯ ಸಂಪ್ರದಾಯವೊಂದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶ ಪ್ರವೀಣ್ ಸೂದ್ ಅವರು ತೀಲಾಂಜಲಿ ಹಾಡಿದ್ದಾರೆ.
ಐಜಿಪಿ ಅವರು ತಮ್ಮ ಕಚೇರಿಯಿಂದ ಹೊರಗಡೆ ಬಂದಾಗ ಹಾಗೂ ರಾಜ್ಯ ಪ್ರವಾಸ ಕೈಗೊಂಡಾಗ ಸ್ಥಳೀಯ ಪೊಲೀಸರು ರಸ್ತೆ ಬದಿ ಅಲ್ಲಲ್ಲಿ ಶಿಸ್ತಾಗಿ ನಿಂತು ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು. ಆದರೀಗ ಈ ಪದ್ದತಿಗೆ ಗುಡ್ ಬೈ ಹೇಳಲಾಗಿದೆ. ಡಿಜಿ ಮತ್ತು ಐಜಿಪಿ ಯಾವುದೇ ವೇಳೆ ರಾಜ್ಯ ಪ್ರವಾಸ ಕೈಗೊಂಡಾಗ ಜಿಲ್ಲಾ ಸರಹದ್ದು ದಾಟುವವರೆಗೂ ಪೊಲೀಸರನ್ನು ಕಳುಹಿಸಲಾಗುತ್ತಿತ್ತು.
ಅಲ್ಲದೆ ಈ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಡಿಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು ರಸ್ತೆ ಬದಿ ನಿಲ್ಲುತ್ತಿದ್ದರು. ಆದರೀಗ ಯಾವ ಅಧಿಕಾರಿಯೂ ರಸ್ತೆಯಲ್ಲಿ ನಿಂತು ಕಾಯುವ ಅವಶ್ಯಕತೆ ಇಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ