ಸೋಮವಾರ ಆನ್ ಲೈನ್ ಶಿಕ್ಷಣ ವಿವಾದಕ್ಕೆ ತೆರೆ : ಸುರೇಶ್ ಕುಮಾರ್

ಬಳ್ಳಾರಿ

       ಆನ್‍ಲೈನ್ ಶಿಕ್ಷಣ ಕುರಿತಂತೆ ಪರ ವಿರುದ್ಧದ ಚರ್ಚೆ ನಡೆಯುತ್ತಿದ್ದು, ಈ ಕುರಿತ ವಿವಾದಕ್ಕೆ ಸೋಮವಾರ ತೆರೆ ಎಳೆಯುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

       ಯಾವ ತರಗತಿಗಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕು ಎನ್ನುವ ಕುರಿತು ಪರ ವಿರುದ್ಧದ ಚರ್ಚೆಗಳು ನಡೆಯುತ್ತಿವೆ. ಈ ವಿಚಾರ ಒಂದು ರೀತಿಯಲ್ಲಿ ಗೀಳಾಗಿ ಪರಿವರ್ತನೆಯಾಗಿದೆ. ಆನ್ ಶಿಕ್ಷಣದ ದುಷ್ಪರಿಣಾಮ ಮತ್ತು ಒಳಿತಿನ ಬಗ್ಗೆ ಅಭಿಪ್ರಾಯ ಕ್ರೋಢೀಕರಣವಾಗುತ್ತಿದೆ. ಯಾವ ತರಗತಿಗಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕೆಂಬ ಬಗ್ಗೆ ಸರ್ಕಾರ ಆದೇಶ ನೀಡಲಿದೆ ಎಂದಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆನ್ ಶಿಕ್ಷಣ ನೀಡಬಾರದು ಎಂದು ಸರ್ಕಾರ ನಿರ್ಧರಿಸಿದೆ. ಆದರೆ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಇಲ್ಲವೇ ಕಾಲೇಜು ಹಂತದಲ್ಲಿ ಆನ್‍ಲೈನ್ ಶಿಕ್ಷಣ ನೀಸುವಂತಿದ್ದರೆ ಅದರ ಸ್ಪರೂಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

      ಇದೇ 25 ರಿಂದ ಜುಲೈ 4 ವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಜುಲೈ ಅಂತ್ಯ ಇಲ್ಲವೆ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಹೈಕೋರ್ಟ್ ನಿರ್ದೇಶನದಂತೆ ಮಕ್ಕಳ ಸುರಕ್ಷತೆಗೆ ಆದ್ಯತೆ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆ ಎಂದರು. ಈ ಬಾರಿ ಒಟ್ಟು 8, 48, 203 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಆರೋಗ್ಯ ತಪಾಸಣೆ ನಡೆಸಲಿದೆ. ಅನಾರೋಗ್ಯ ಕಂಡ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗುವುದು.

     ಶೈಕ್ಷಣಿಕ ವರ್ಷ ಆರಂಭಿಸುವ ಕುರಿತು ಇದುವರೆಗೆ ಕೇಂದ್ರ ಸರಕಾರ ಯಾವುದೇ ರಾಜ್ಯಗಳಿಗೆ ಅನುಮತಿ ನೀಡಿಲ್ಲ. ಆದರೂ ರಾಜ್ಯ ಸರಕಾರ ಮಕ್ಕಳ, ಪಾಲಕ ಪೋಷಕರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

      ಪಿಯು ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಹಲವು ವರ್ಷಗಳಿಂದ ನೆನೆಗುದಿಗೆ ಬದಿದ್ದು, ಈಗ ನೇಮಕಾತಿ ಆದೇಶ ನೀಡಬೇಕಾಗಿದ್ದು, ದಾಖಲಾತಿಗಳ ಪರಿಶೀಲನೆ ಮುಗಿಯುವ ಹಂತಕ್ಕೆ ಬಂದಿದ್ದು ಜೂ.18 ರ ನಂತರ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಿ ನೇಮಕಾತಿ ಆದೇಶ ನೀಡಲಾಗುವುದು ಎಂದರು.

     ಆರ್ಟಿಇ ನಡಿ ಖಾಸಗೀ ಶಾಲೆಗಳಿಗೆ ನೀಡಬೇಕಾಗಿರುವ ಬಾಕಿ ಹಣದಲ್ಲಿ 275 ಕೋಟಿ ರೂ.ಗಳನ್ನು ಬಿಡಗಡೆ ಮಾಡಲಾಗಿದೆ. ಈ ಹಣವನ್ನು ಶಾಲೆಗಳು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬೇಕು ಎಂದ ಅವರು, ಇನ್ನುಳಿದ 575 ಕೋಟಿ ರೂ. ಬಾಕಿ ಹಣವನ್ನು ಬರುವ ಮೂರು ನಾಲ್ಕು ತಿಂಗಳಲ್ಲಿ ನೀಡುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link