ತಿಪಟೂರು :
ಕೊಬ್ಬರಿಯ ಬೆಂಬಲ ಬೆಲೆಗಿಂತ ಕೆಳಮಟ್ಟದ ಬೆಲೆಗೆ ಕುಸಿತ ಕಂಡಾಗ ಒಂದು ಟೆಂಡರ್ನ ಒಳಗಾಗಿ ನಫೆಡ್ ಕೇಂದ್ರ ತೆರೆಯಲು ಅವಕಾಶ ಮಾಡಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅದ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು.ಕೊಬ್ಬರಿ ಬೆಳೆಯ ಧಾರಣೆ ಕುಸಿತದ ಹಿನ್ನಲೆಯಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ರೈತ ಮುಂಖಂಡರು ಹಾಗೂ ಎ.ಪಿ.ಎಮ್.ಸಿ ಅದ್ಯಕ್ಷ ಹಾಗೂ ನಿರ್ದೇಶಕರು, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಾ ಮಾತನಾಡಿದ ಅವರು ಕೊಬ್ಬರಿಯ ಬೆಲೆಯು ಫೆಬ್ರವರಿ ತಿಂಗಳ ಕೊನೆಯಲ್ಲಿ ಕುಸಿತ ಆದರೂ ಸಹ ಸುಮಾರು ನಾಲ್ಕು ತಿಂಗಳು ಕಳೆದರೂ ನಫೆಡ್ ಪ್ರಾರಂಭವಾಗದಿದ್ದನ್ನು ಗಮನಿಸಿ ರೈತರಿಗೆ ಆಗುವ ನಷ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರೈತ ಬೆಳೆದ ಬೆಳೆಗೆ ನಾಲ್ಕು ಹಂತದ ಮೂಲಕ ಬೆಲೆಯನ್ನು ನಿಗದಿಪಡಿಸಲು ಮಾನದಂಡವನ್ನು ಆಳವಡಿಸಿಕೊಂಡಿದ್ದು, ಕೊಬ್ಬರಿ ಬೆಲೆ ಕುಸಿತ ಕಂಡಾಗ ತಕ್ಷಣ ಟಾಸ್ಕ್ ಪೋರ್ಸ್ ಕಮಿಟಿಯು ಜಾಗೃತಗೊಳ್ಳಬೇಕು, ಈ ಕಮಿಟಿಗೆ ಪ್ರಗತಿಪರ ರೈತರನ್ನು ಜೋಡಿಸುವ ಕಾರ್ಯವಾಗಬೇಕು, ಕೊಬ್ಬರಿಯು ಕೆಡದಂತೆ ಶೀಥಲೀಕರಣ ಘಟಕವನ್ನು ಸ್ಥಾಪಿಸುವ ಚಿಂತನೆ, ರೈತರು ಮಾರುಕಟ್ಟೆಗೆ ಬಂದು ಬೆಳೆದ ಬೆಳೆಯನ್ನು ಮಾರಾಟ ಮಾಡುವ ಬದಲು ಮೋಬೈಲ್ ಮಾರುಕಟ್ಟೆಯ ವ್ಯವಸ್ಥೆ ಬಗ್ಗೆ ಚಿಂತಿಸಲಾಗುವುದು. ರೈತರಿಂದ ಸರ್ಕಾರ ಯಾವುದೇ ಬೆಳೆ ಪದಾರ್ಥಗಳನ್ನು ಪಡೆಯುವಾಗ ಗುಣಮಟ್ಟವನ್ನು ಕೇಳುತ್ತದೆ ಆದರೆ ಅದೇ ಸರ್ಕಾರವು ರೇಷನ್ ಕೂಡುವ ಕಲಬೆರಕೆಯ ಪದಾರ್ಥಗಳನ್ನು ನೀಡುತ್ತವೆ ಇದರ ಬಗ್ಗೆ ಗಮನಹರಿಸುವ ಚಿಂತನೆ ಮಾಡಲಾಗುವುದು ಎಂದರು.
ಚರ್ಚೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅದ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಮಂಜುನಾಥ್, ಮಾಜಿ ಅದ್ಯಕ್ಷ ದಿವಾಕರ್, ಸಿದ್ದಲಿಂಗಸ್ವಾಮಿ, ತೋಟಗಾರಿಕೆ ಹಿರಿಯ ಅಧಿಕಾರಿ ರಘುಕುಮಾರ್, ಕೃಷಿ ಅಧಿಕಾರಿ ಜಗನ್ನಾಥ್, ಡಿ.ವೈ.ಎಸ್ಪಿ ಚಂದನ್ಕುಮಾರ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಮನೋಹರ್ ಪಟೇಲ್, ರೈತ ಮುಂಖಂಡ ರಾಜಣ್ಣ ಮತ್ತಿತ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ