ಹಣದ ದುರಾಸೆಯಿಂದಾಗಿ ಸಾಮಾನ್ಯ ಜನಕ್ಕೆ ಮೋಸ ಮಾಡಿದ ಶಾಸಕರು : ಹಾರ್ದಿಕ್ ಪಟೇಲ್

ಅಹಮದಾಬಾದ್:

      ಪಕ್ಷಾಂತರ ಮಾಡುವ  ಶಾಸಕರನ್ನು ಸಾರ್ವಜನಿಕರು ಚಪ್ಪಲಿಯಿಂದ ಹೊಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಕಿಡಿಕಾರಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನಲ್ಲಿ ಕೆಲ ಶಾಸಕರು  ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಪಟೇಲ್ ಪ್ರತಿಕ್ರಯಿಸಿದ್ದಾರೆ.

      “ಕಳೆದ ಒಂದು ತಿಂಗಳಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಅವರು 140 ಕೋಟಿ ರೂ.ಗಳಿಂದ 150 ಕೋಟಿ ರೂ. ಖರ್ಚು ಮಾಡಿದ್ದಾರೆ. ಅವರು ಈ ಹಣವನ್ನು ವೆಂಟಿಲೇಟರ್‌ಗಳನ್ನು ಖರೀದಿಸಲು ಖರ್ಚು ಮಾಡಿದ್ದರೆ   ಕೆಲವು ಜೀವಗಳನ್ನು ಉಳಿಸಬಹುದಿತ್ತು.

       “ಹಣದ ದುರಾಸೆಯಿಂದಾಗಿ ಸಾಮಾನ್ಯ ಜನಕ್ಕೆ ಮೋಸ ಮಾಡಿದ ಶಾಸಕರು  ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಅಂತಹಾ ಶಾಸಕರಿಗೆ ಚಪ್ಪಲಿಯಿಂದ ಹೊಡೆಯಬೇಕು” ಎಂದು ಪಟೇಲ್ ಶನಿವಾರ ಎಎನ್‌ಐಗೆ ತಿಳಿಸಿದರು.

        “ಚುನಾವಣೆಗೆ ಮುಂಚಿತವಾಗಿ ಅವರೇಕೆ ರಾಜೀನಾಮೆ ನೀಡುತ್ತಿದ್ದಾರೆ? ಎಲ್ಲವನ್ನೂ ತಿಳಿದಿದ್ದರೂ ಚುನಾವಣಾ ಆಯೋಗವೂ ಮೌನವಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಪ್ರಯತ್ನಿಸುತ್ತಿದೆ. ನಾವು ಎರಡು ರಾಜ್ಯಸಭಾ ಸ್ಥಾನಗಳನ್ನು ಖಚಿತವಾಗಿ ಗೆಲ್ಲುತ್ತೇವೆ” ಎಂದು ಅವರು ಹೇಳಿದರು.

       ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಈ ಬೆಳವಣಿಗೆ ನಂತರ ಕಾಂಗ್ರೆಸ್  ತನ್ನ ಶಾಸಕರನ್ನು ರಾಜ್ಯ ಮತ್ತು ರಾಜಸ್ಥಾನದ ವಿವಿಧ ರೆಸಾರ್ಟ್‌ಗಳಿಗೆ ಸ್ಥಳಾಂತರಿಸಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap