ಚಿಕ್ಕಮಗಳೂರು
ಕರ್ನಾಟಕದ ವಿಧಾನಸಭೆ ಚುನಾವಣೆಯ ಮತದಾನಕ್ಕೆ 2 ದಿನ ಬಾಕಿ ಇದೆ. ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.
ಕಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ. ಎಸ್. ಪ್ರಕಾಶ್, ಕಾಂಗ್ರೆಸ್‌ನಿಂದ ಆನಂದ್ ಕೆ. ಎಸ್. ಮತ್ತು ಜೆಡಿಎಸ್‌ನಿಂದ ವೈಎಸ್‌ವಿ ದತ್ತಾ ಅಭ್ಯರ್ಥಿಗಳು.
ನಾನು ವೈ.ಎಸ್.ವಿ. ದತ್ತಾ, ವಯಸ್ಸು 69, ಯಗಟಿ, ತಾ : ಕಡೂರು ಖಾಯಂ ರಹವಾಸಿಯಾಗಿದ್ದೇನೆ. ಕಡೂರು ಕ್ಷೇತ್ರವು ರಾಜ್ಯದ ಅತ್ಯಂತ ಎರಡನೇ ದೊಡ್ಡ ಕ್ಷೇತ್ರ. ನಾನು ಜಾತ್ಯತೀತ ಜನತಾದಳದಿಂದ (ಎಸ್) ಸ್ಪರ್ಧೆ ಮಾಡುತ್ತಿದ್ದೇನೆ, ನನ್ನ ಗುರುತು ತೆನೆ ಹೊತ್ತ ಮಹಿಳೆ ‘ಕ್ರಮ ಸಂಖ್ಯೆ 2’ ಎಂದು ತಿಳಿಸಲಾಗಿದೆ.
ನಾನು ಕಡೂರು ಕ್ಷೇತ್ರದ ಜನರಿಗೆ ಎಂದು ಕಪ್ಪು ಚುಕ್ಕೆ ತರುವುದಿಲ್ಲ, * ನಾನು ಕಡೂರು ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಇದು ನನ್ನ ಸಂಕಲ್ಪ. * ನಾನು ಪಾರದರ್ಶಕ, ಜನಸ್ನೇಹಿ ಆಡಳಿತ ಜೊತೆಗೆ ಯಾವುದೇ ಜಾತಿ ಬೇಧ ಭಾವ ಮಾಡುವುದಿಲ್ಲ. * ನಾನು ಕ್ಷೇತ್ರದಲ್ಲಿ ಸಾಮರಸ್ಯ, ಜಾತೀಯತೆ, ಶಾಂತಿಯಿಂದ ನೆಲಸಲು ಕಟಿಬದ್ಧನಾಗಿದ್ದೇನೆ. * ನಾನು ಬಿಡುಗಡೆ ಮಾಡಿರುವ ನನ್ನ ಮತ್ತು ಪಕ್ಷದ ಪ್ರಣಾಳಿಕೆಯಂತೆ 2023-ಹೊಸ ಕಡೂರು ನಿರ್ಮಾಣ ಮತ್ತು ಸಂಕಲ್ಪಕ್ಕೆ ಕಂಕಣ ಬದ್ಧವಾಗಿದ್ದೇನೆ. * ನಾನು ರೈತರ ಕಷ್ಟಕ್ಕೆ ಸ್ಪಂದನೆ, ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು, ರೈತರಿಗೆ ಉಚಿತ ಸಾಗುವಾಳಿ ಚೀಟಿ ನೀಡಲು ನಾನು ಬದ್ಧನಾಗಿದ್ದೇನೆ. * ಕ್ಷೇತ್ರದ ಜನರ ಸಮಸ್ಯೆಗಳಿಗೆ ಹಗಳಿರುಳು, ಯಾವುದೇ ಜಾತಿ, ಬೇಧ, ಭಾವವಿಲ್ಲದೇ ದಿನದ 24 ಗಂಟೆ ಶ್ರಮಿಸಲು ಬದ್ಧನಾಗಿದ್ದೇನೆ.