ಬಾಗಲಕೋಟೆ:

ಬಚ್ಚಲು ಮನೆಯಲ್ಲಿ ಪಾತ್ರೆ ತೊಳೆಯುವ ವೇಳೆ ವಿದ್ಯುತ್ ಪ್ರವಹಿಸಿ ವೃದ್ಧ ದಂಪತಿ ಮೃತಪಟ್ಟ ಘಟನೆ ಬಾಗಲಕೋಟೆಯ ನಗರದ ಸೆಕ್ಟರ್ ನಂ. 2ರಲ್ಲಿ ಬುಧವಾರ ಸಂಭವಿದೆ.
ಮೃತಪಟ್ಟ ವೃದ್ಧ ದಂಪತಿಯನ್ನು ಸ್ವಾಮಿರಾವ್ ಕುಲಕರ್ಣಿ (75), ಪತ್ನಿ ಸರೋಜಾ ಕುಲಕರ್ಣಿ (60) ಎಂದು ಗುರುತಿಸಲಾಗಿದೆ.
ಸರೋಜಾ ಕುಲಕರ್ಣಿ ಮುಂಜಾನೆ ಬಚ್ಚಲು ಮನೆಯಲ್ಲಿ ಪಾತ್ರೆ ತೊಳೆಯುವಾಗ ವಿದ್ಯುತ್ ತಂತಿ ಹಾದು ಹೋಗಿದ್ದ ಪೈಪ್ನಲ್ಲಿ ನೀರು ಹರಿದು ವಿದ್ಯುತ್ ಪ್ರವಹಿಸಿದೆ. ಈ ವೇಳೆ ಕೂಗಿಕೊಂಡ ಪತ್ನಿಯನ್ನು ರಕ್ಷಿಸಲು ಹೋದ ಸಂದರ್ಭ ಪತಿಗೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರೂ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








